ಪವರ್ ಸ್ಟಾರ್ ಅಭಿಮಾನಿಗಳಿಗೆ ಸಿಹಿ ಸುದ್ದಿ
'ಕನ್ನಡದ ಕೋಟ್ಯಾಧಿಪತಿ' ಶೋ ಮೂಲಕ ಅಪ್ಪು ಮೋಡಿ ಮಾಡಿದ್ದರು. ಪುನೀತ್ ಮತ್ತೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈಗ ಮತ್ತೊಂದು ರಿಯಾಲಿಟಿ ಶೋನಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರೆ. ಹೊಸ ರೀತಿಯ ರಿಯಾಲಿಟಿ ಶೋ ಇದಾಗಿದ್ದು, ಪುನೀತ್ ನಿರೂಪಕರಾಗಿ ಕಾಣಿಸಿಕೊಳ್ಳಲಿದ್ದಾರೆ.
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳಿಗೆ ಸಿಹಿ ಸುದ್ದಿ ಇಲ್ಲಿದೆ. ಪುನೀತ್ ಮತ್ತೆ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್ ಸ್ಟಾರ್ ಅಮಿತಾಬ್ ಬಚ್ಚನ್ ನಡೆಸಿಕೊಡುವ 'ಕೌನ್ ಬನೇಗಾ ಕರೋಡ್ ಪತಿ' ಮಾದರಿಯಲ್ಲಿ 'ಕನ್ನಡದ ಕೋಟ್ಯಾಧಿಪತಿ' ಮೂಡಿ ಬಂದಿತ್ತು. ಪುನೀತ್ ರಾಜ್ ಕುಮಾರ್ ತಮ್ಮದೇ ಶೈಲಿಯಲ್ಲಿ ಪ್ರಶ್ನೆಗಳನ್ನು ಕೇಳುವ ಮೂಲಕ ನಿರೂಪಣೆ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗಿದ್ದರು. ಈಗ ಗೇಮ್ ಶೋ ಮೂಲಕ ಮತ್ತೆ ಕಿರುತೆರೆಯಲ್ಲಿ ಮಿಂಚು ಹರಿಸಲಿದ್ದಾರೆ ಸದ್ಯ ಅವರು ಹರ್ಷ ನಿರ್ದೇಶನದ 'ಅಂಜನಿಪುತ್ರ' ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ನಂತರದಲ್ಲಿ ಟಿ.ವಿ. ಶೋ ಕುರಿತಾಗಿ ಹೆಚ್ಚಿನ ಮಾಹಿತಿ ಸಿಗಲಿದೆ.
Comments