ನಟ ಶಿವರಾಜಕುಮಾರ್ ಮುಂದಿನ ಚಿತ್ರ 'ಹರಿಹರ'
ಬೆಂಗಳೂರು: ಸ್ಯಾಂಡಲ್ ವುಡ್ ನ ನಟ ಶಿವಣ್ಣ ಸದ್ದಿಲ್ಲದೇ ಹೊಸ ಚಿತ್ರವೊಂದಕ್ಕೆ ಗ್ರಿನ್ ಸಿಗ್ನಲ್ ನೀಡಿದ್ದಾರೆ. ಹಾಗಾದ್ರೆ ಶಿವರಾಜ ಕುಮಾರ್ ಹೊಸದಾಗಿ ಯಾವ ಸಿನಿಮಾದಲ್ಲಿ ನಟಿಸಲಿದ್ದಾರೆ ಎಂಬ ಕುತೂಹಲ ಅವರ ಅಭಿಮಾನಿಗಳಲ್ಲಿ ಮನೆ ಮಾಡಿದೆ.ಸದ್ಯಕ್ಕೆ ವಿಲನ್ ಚಿತ್ರದಲ್ಲಿ ಬ್ಯೂಸಿಯಾಗಿದ್ದಾರೆ.
ಮೂಲಗಳ ಪ್ರಕಾರ, ನಟ ಶಿವರಾಜ ಕುಮಾರ್ ಅವರ ಮುಂದಿನ ಚಿತ್ರ ಹರಿಹರ ಎಂದು ನಾಮಕರಣಗೊಂಡಿದೆ. ಕಥೆ, ಚಿತ್ರಕಥೆ, ಸಂಭಾಷಣೆ ಜವಾಬ್ದಾರಿ ಹೊತ್ತಿರುವ ನಿರ್ದೇಶಕ ಪ್ರಮೋದ ಚಕ್ರವರ್ತಿ ಶಿವಣ್ಣ ಅವರನ್ನು ಈ ಸಿನಿಮಾದಲ್ಲಿ ಹೊಸ ಗೆಟಪ್ ನಲ್ಲಿ ಶಿವಣ್ಣ ಅವರನ್ನು ತೋರಿಸಲು ಉತ್ಸಾಹದಲ್ಲಿದ್ದಾರಂತೆ. ಡಾಲ್ಫಿಮ್ ಮೀಡಿಯಾ ಹೌಸ್ ಬ್ಯಾನರ್ ಅಡಿ ಮಹದೇವ್ ಬಿ. ಸಂಗಪ್ಪ, ಹಾಗೂ ಚಕ್ರವರ್ತಿ ಸಿನಿಮಾವನ್ನುನಿರ್ಮಿಸುತ್ತಿದ್ದಾರೆ.
ಚಿತ್ರದ ಶೀರ್ಷಿಕೆ ನೋಡಿದ್ರೆ ಶಿವಣ್ಣ ಡಬಲ್ ರೋಲ್ ನಲ್ಲಿ ನಟಿಸುತ್ತಾರಾ? ಎಂದು ಪ್ರಶ್ನೆ ಮೂಡಿದೆ. ಆದರೆ ಎರಡು ವಿಭಿನ್ನ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳಲಿದ್ದಾರಂತೆ.ಇದೊಂದು ಪಕ್ಕಾ ಔಟ್ ಆಂಡ್ ಔಟ್ ಕಮರ್ಷಿಯಲ್ ಚಿತ್ರವಿದು, ಇದೊಂದು ಫ್ಯಾಮಿಲಿ ಸಬ್ಜೆಕ್ಟ್ ಮನರಂಜನೆಗೆ ಬರವಿಲ್ಲದಂತಹ ಚಿತ್ರ. ಸೆಂಟಿಮೆಂಟ್ , ರಿವೇಂಜ್ ಇತ್ಯಾದಿ ಅಂಶಗಳು ಇಲ್ಲಿವೆ.
Comments