ನಟಿ ರಶ್ಮಿಕಾ ಯಾರ ಫ್ಯಾನ್ ಗೊತ್ತಾ?

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣರಿಗೆ ಸುದೀಪ್ ಅಂದ್ರೆ ತುಂಬಾ ಇಷ್ಟವಂತೆ, ರಶ್ಮಿಕಾ, ಸುದೀಪ್ ಅವರ ಬಿಗ್ ಫ್ಯಾನ್ ಅಂತೆ. ಇತ್ತೀಚಿಗೆ ಖಾಸಗಿ ವಾಹಿನಿಯಲ್ಲಿ ಪ್ರಸಾರಗೊಂಡ ಸೂಪರ್ ಟಾಕ್ ಟೈಮ್ ರಿಯಾಲಿಟಿ ಶೋನಲ್ಲಿ ರಶ್ಮಿಕಾ ತಮ್ಮ ನೆಚ್ಚಿನ ನಟನ ಬಗ್ಗೆ ಮಾತನಾಡಿದರು. ಈ ಶೋನ ರಾಪಿಡ್ ಸುತ್ತಿನಲ್ಲಿ ಕೆಲ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಶೋಗೆ ಬಂದ ಅತಿಥಿಗಳು ಈ ಪ್ರಶ್ನೆಗಳಿಗೆ ನೇರವಾಗಿ ಹಾಗೂ ಪ್ರಮಾಣಿಕವಾಗಿ ಉತ್ತರಿಸಬೇಕು.
ಅದೇ ರೀತಿ ನಿಮ್ಮ ಸ್ಟೈಲಿಶ್ ಐಕಾನ್ ಯಾರು ಎಂದು ಅಕುಲ್ ಬಾಲಾಜಿ ರಶ್ಮಿಕಾರಿಗೆ ಪ್ರಶ್ನಿಸಿದರು. ಇದಕ್ಕೆ ರಶ್ಮಿಕಾ ಸುದೀಪ್ ಅವರ ಹೆಸರು ಸೂಚಿಸಿದರು.ಸುದೀಪ್ ಅವರ ಮಾತನಾಡುವ, ನಡೆಯುವ ಶೈಲಿ ಹಾಗೂ ನಟನಾ ಶೈಲಿ ನನಗೆ ತುಂಬಾ ಇಷ್ಟ ಎಂದು ರಶ್ಮಿಕಾ ಹೇಳಿದರು.
Comments