ಶಾರೂಖ್- ಐಶ್ವರ್ಯ ಇಬ್ಬರು ತೆರೆ ಹಂಚಿಕೊಳ್ಳಲು ಒಲ್ಲೇ ಎನ್ನುತ್ತಿದ್ದರಂತೆ....

ಹಲವು ಬಾರಿ ವಿವಿಧ ಚಿತ್ರನಿರ್ಮಾಪಕರು ಈ ಇಬ್ಬರನ್ನು ಅಪ್ರೋಚ್ ಮಾಡಿದ್ದರೂ ಕೂಡ, ಯಾವುದೇ ಪ್ರಯೋಜನವಾಗಿಲ್ಲವಂತೆ. ಶಾರೂಖ್ ಖಾನ್ ಮತ್ತು ಐಶ್ವರ್ಯ ರೈ ಬಚ್ಚನ್ ಅವರನ್ನು ಜೊತೆಯಾಗಿ ನಟಿಸಬೇಕು ಎಂದು ಹಲವು ಬಾರಿ ನಿರ್ಮಾಪಕರು ದಂಬಾಲು ಬಿದ್ದರೂ ಇಬ್ಬರು ಜಪಯ್ಯ ಎಂದರು ಇದಕ್ಕೆ ಒಪ್ಪಿಲ್ಲವಂತೆ.
ಶಾರೂಖ್ ಖಾನ್ ಮತ್ತು ಐಶ್ವರ್ಯ ರೈ ಬಚ್ಚನ್ ಅವರನ್ನು ತೆರೆ ಮೇಲೆ ಜೊತೆಯಾಗಿ ನೋಡುವುದು ಅವರ ಅಭಿಮಾನಿಗಳ ಬಹುದಿನಗಳ ಕನಸು. ಆದರೆ ಅದ್ಯಾಕೋ ಏನೋ ಈ ಜೋಡಿಗಳು ಮಾತ್ರ ಇದಕ್ಕೆ ಮನಸ್ಸು ಮಾಡುತ್ತಿಲ್ಲ. ಸಂಜಯ್ ಲೀಲಾ ಬನ್ಸಾಲಿ ತಮ್ಮ ಮುಂದಿನ ಚಿತ್ರದಲ್ಲಿ ಈ ಇಬ್ಬರು ಸ್ಟಾರ್ ಗಳನ್ನು ಜೊತೆಯಾಗಿ ನಟಿಸುವಂತೆ ಮನವಿ ಮಾಡಿದರಂತೆ. ಆದರೆ ಶಾರೂಖ್ ಆಗಲಿ ಐಶ್ವರ್ಯ ಆಗಲಿ ಇದಕ್ಕೆ ಎಸ್ ಎಂದಿಲ್ಲ. ದಿಲ್ ಹೈ ಮುಷ್ಕಿಲ್ ಚಿತ್ರ ಬಿಡುಗಡೆಯಾದ ಬಳಿಕ ಶಾರೂಖ್ ಖಾನ್ ಮ್ತತು ಐಶ್ವರ್ಯ ರೈ ಬಚ್ಚನ್ ಗೆ ಮೂರು ಬಿಗ್ ಬಜೆಟ್ ಚಿತ್ರಗಳಲ್ಲಿ ಜೊತೆಯಾಗಿ ನಟಿಸುವಂತೆ ಆಫರ್ ಗಳು ಬಂದಿದ್ದವಂತೆ. ವಿಪರ್ಯಾಸವೆಂದರೆ ಇವರಿಬ್ಬರೂ ಕೂಡ ಈ ಆಫರ್ ಅನ್ನು ರಿಜೆಕ್ಟ್ ಮಾಡಿದ್ದಾರೆ. ಹಾಗೆ ನೋಡಿದರೆ ಇವರಿಬ್ಬರ ನಡುವೆ ಯಾವುದೇ ಮುನಿಸಿಲ್ಲ. ಮೂಲಗಳ ಪ್ರಕಾರ, ಸರಿಯಾದ ಸ್ಕ್ರಿಪ್ಟ್ ಇಲ್ಲದೆ ಜೊತೆಯಾಗಿ ನಟಿಸಲು ನಾವು ಒಲ್ಲೆ ಎಂದಿದ್ದಾರಂತೆ ಇಬ್ಬರು ನಟ ನಟಿಯರು. ಇಬ್ಬರಿಗೂ ಮತ್ತೆ ತೆರೆಹಂಚಿಕೊಳ್ಳಲು ಇಷ್ಟವಿದೆ. ಆದರೆ ಸರಿಯಾದ ಸ್ಕ್ರೀಪ್ಟ್ ಇರುವ ಚಿತ್ರಗಳು ಸಿಗುತ್ತಿಲ್ಲ. ಸರಿಯಾದ ಚಿತ್ರಕತೆ ಸಿಕ್ಕಿದ್ದಲ್ಲಿ ಖಂಡಿತವಾಗಿಯೂ ಅವರು ಮತ್ತೆ ತೆರೆಹಂಚಿಕೊಳ್ಳಲಿದ್ದಾರೆ ಎನ್ನುತ್ತಿವೆ ಈ ಇಬ್ಬರು ನಟ ನಟಿಯರ ಕುಟುಂಬದ ಮೂಲಗಳು. ಏನೇ ಆಗಲಿ ಅಭಿಮಾನಿಗಳ ಬಹುದಿನಗಳ ಕನಸು ಆದಷ್ಟು ಬೇಗನೆ ಈಡೇರಲಿ ಎಂಬುದೇ ನಮ್ಮ ಹಾರೈಕೆ...
Comments