‘ತಾರಕ್’ ಸಿನಿಮಾದ ರಹಸ್ಯ ಬಿಟ್ಟುಕೊಟ್ಟ ಚಾಲೆಂಜಿಂಗ್ ಸ್ಟಾರ್ ದರ್ಶನ್..!!
ನಿರ್ದೇಶಕ ನಾಗಣ್ಣ ಅವರ ಮಗಳು ವಿದೇಶದಲ್ಲಿದ್ದಾರೆ. ತುಂಬಾ ವರ್ಷಗಳಿಂದ ಅಲ್ಲೇ ಇದ್ದಾರೆ. ಇತ್ತೀಚೆಗೆ ಅವರ ಹುಟ್ಟುಹಬ್ಬ ಇತ್ತು. ಆದರೆ, ನಾಗಣ್ಣ ಮಾತ್ರ ಇಲ್ಲಿ 'ಕುರುಕ್ಷೇತ್ರ' ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದರು. ಆದರೆ, ಮಗಳಿಗೆ ಒಂದು ಸರ್ಪ್ರೈಸ್ ಕೊಡಬೇಕು ಅಂತ ಅವರಿಗೆ ಬರ್ತ್ಡೇ ವಿಷ್ ಮಾಡಿ ನಾನು ಮತ್ತು ನಾಗಣ್ಣ ಒಂದು ವಿಡಿಯೋ ಮಾಡಿ ಕಳಿಸಿದ್ವಿ.
ನಮ್ಮ ವಿಡಿಯೋ ಸಂದೇಶ ನೋಡಿ ಅವರಿಗೆ ಎಷ್ಟು ಸಂಭ್ರಮವಾಗಿತ್ತೆಂದರೆ ನನಗೆ ಅವರು ದೊಡ್ಡ ಪತ್ರ ಬರೆದು ಕೃತಜ್ಞತೆ ಸಲ್ಲಿಸಿದರು. ನಾವು, ನಮ್ಮೂರು, ನೆಂಟರು, ಸ್ನೇಹಿತರು ಎಲ್ಲರನ್ನು ಬಿಟ್ಟು ನಮ್ಮದಲ್ಲದ ಊರಿನಲ್ಲೇ ಬದುಕುತ್ತ ಇಂಥ ಚಿಕ್ಕ ಚಿಕ್ಕ ವಿಷಯಗಳನ್ನು ದೊಡ್ಡದಾಗಿ ಸಂಭ್ರಮಿಸುತ್ತಿದ್ದಾರಲ್ಲ ಅಂಥ ಕುಟುಂಬಗಳು ನೂರಾರು ಇವೆ. ಅಂಥಾ ಫ್ಯಾಮಿಲಿಗಳ ಕತೆಯನ್ನೇ ಈ ಸಿನಿಮಾ ಹೇಳುತ್ತದೆ.ಹೀಗೆ ನಟ ದರ್ಶನ್ ಅವರು ಒಂದು ನೈಜ ಉದಾಹರಣೆ ಮೂಲಕ ತಮ್ಮ ನಟನೆಯ 'ತಾರಕ್' ಚಿತ್ರದ ಕತೆಯ ಗುಟ್ಟು ಬಿಟ್ಟು ಕೊಟ್ಟರು.
ಸಾಮಾನ್ಯವಾಗಿ ಹೊರ ದೇಶದಲ್ಲಿ ಬದುಕುತ್ತಿರುವವರು ದೂರದಿಂದ ತುಂಬಾ ಸುಂದರವಾಗಿಯೇ ಕಾಣುತ್ತಾರೆ. ಆದರೆ, ದೇಶ ಬಿಟ್ಟು ವಿದೇಶದಲ್ಲಿ ನೆಲೆಸಿರುವ ನಮ್ಮ ಕುಟುಂಬಗಳ ಈ ಸಂ'್ರಮ, ಸಂಕಟ, ತಾಕಲಾಟ, ಸಂಬಂಧಗಳ ಕುರಿತು 'ತಾರಕ್' ಸಿನಿಮಾ ಮಾತನಾಡುತ್ತದೆ. ಹಾಗೆ ವಿದೇಶದಿಂದ ಸ್ವದೇಶಕ್ಕೆ ಬರುವ ನಾಯಕ ಮತ್ತು ಆತನ ತಾತನ ಮತ್ತವರ ಕುಟುಂಬದ ಸುತ್ತ ಸಿನಿಮಾ ಸಾಗುತ್ತದೆ. ಅಲ್ಲದೆ ಚಿತ್ರದಲ್ಲಿ ಎರಡ್ಮೂರು ಗೆಟಪ್ಗಳಿವೆ. ಸಂಪೂರ್ಣವಾಗಿ ಟ್ರೆಡಿಷನಲ್ ಆಗಿದೆ. ಹೀಗಾಗಿ ಇಲ್ಲಿ ಪಕ್ಕಾ ದೇಸಿತನವೂ ಇದೆ. ಜತೆಗೆ ಒಂದು ಫ್ಯಾಮಿಲಿ ಎಂಟರ್'ಟೈನರ್'ಗೆ ಬೇಕಾದ ಎಲ್ಲಾ ಅಂಶಗಳು ಈ ಚಿತ್ರದಲ್ಲಿವೆ.
Comments