ಯೂ ಟರ್ನ್ ಸಿನಿಮಾದ ರಿಮೇಕ್ ನಲ್ಲಿ ಸಮಂತಾ ನಟಿಸಲು ರೆಡಿ ?

ನಟಿ ಸಮಂತಾ ಅವರು ಕನ್ನಡದ 'ಯೂ ಟರ್ನ್' ಸಿನಿಮಾದ ರಿಮೇಕ್ ನಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿಯೊಂದು ಹೊರ ಬಿದ್ದಿದೆ. ಈಗ ಈ ಸಿನಿಮಾ ತೆಲುಗು ಮತ್ತು ತಮಿಳು ಭಾಷೆಯಲ್ಲಿ ನಿರ್ಮಾಣವಾಗಲಿದೆ. ಸಿನಿಮಾದಲ್ಲಿ ಶ್ರದ್ಧಾ ನಿರ್ವಹಣೆ ಮಾಡಿದ್ದ ಪಾತ್ರವನ್ನು ಸಮಂತಾ ಮಾಡಲಿದ್ದಾರೆ.
ಎರಡೂ ಭಾಷೆಯಲ್ಲಿ ಸಮಂತಾ ನಟಿಸುವುದು ಮತ್ತೊಂದು ವಿಶೇಷ. ಈ ಹಿಂದೆ ಈ ಸಿನಿಮಾದಲ್ಲಿ ನಟಿ ನಿತ್ಯಾ ಮೆನನ್ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿತ್ತು, ಆದರೆ ಸಮಂತಾ ನಟಿಸಲಿದ್ದಾರೆ. ಅಂದಹಾಗೆ ಈ ಸಿನಿಮಾಗಳನ್ನು ಯಾರು ನಿರ್ದೇಶನ ಮಾಡುತ್ತಾರೆ ಎಂಬುದು ಹೊರ ಬಿದ್ದಿಲ್ಲ. ಮುಂದಿನ ತಿಂಗಳು ಸಮಂತಾ ಅವರು ನಟ ನಾಗಚೈತನ್ಯ ಅವರನ್ನು ವಿವಾಹವಾಗಲಿದ್ದಾರೆ. ಸಮಂತಾ ಅವರು ಮದುವೆ ನಂತರ ಈ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ. ಕನ್ನಡದ ಸಿನಿಮಾ ಬೇರೆ ಭಾಷೆಗೆ ರಿಮೇಕ್ ಆಗುತ್ತಿರುವುದು ಹೆಮ್ಮೆಯ ವಿಷಯ.
Comments