ಬಿಗ್ ಬಾಸ್ ಪ್ರಥಮ್ ಇದೀಗ ದೇವ್ರಂಥಾ ಮನುಷ್ಯನ ಗೆಟಪ್ ನಲ್ಲಿ .....



ತಮ್ಮದೇ ವಿಶಿಷ್ಟ ಪಂಚಿಂಗ್ ಡೈಲಾಗ್ ಗಳಿಂದ ಫೇಮಸ್ ಆಗಿರುವ ಬಿಗ್ ಬಾಸ್ ವಿನ್ನರ್ ಪ್ರಥಮ್ ಸದ್ಯ ದೇವ್ರಂಥಾ ಮನುಷ್ಯ ಸಿನಿಮಾದಲ್ಲಿ ಬ್ಯೂಸಿಯಾಗಿದ್ದಾರೆ. ತಮ್ಮ ಸಿನಿಮಾದ ಟೀಸರ್ ನಲ್ಲಿ ರಾಜ್‍ಕುಮಾರ್, ಕಲ್ಯಾಣ್ ಕುಮಾರ್, ಉದಯ್ ಕುಮಾರ್ ಮತ್ತು ಪ್ರಥಮ್ ಕುಮಾರ್ ಇರುವರೆಗೂ ಕನ್ನಡಕ್ಕೆ ಏನು ಆಗಲ್ಲ ಎಂದು ಡೈಲಾಗ್ ಹೊಡೆದಿದ್ದಾರೆ.
ದೇವ್ರಂಥಾ ಮನುಷ್ಯ’ ಸಿನಿಮಾ ಟೀಸರ್ ಬಿಡುಗಡೆಯಾಗಿದ್ದು, ಇದರಲ್ಲಿ ಪ್ರಥಮ್ ಕುಮಾರ್ ಆಗಿ ಪ್ರಥಮ್ ಬದಲಾಗಿದ್ದಾರೆ. ಅಲ್ಲದೆ ಸಿನಿಮಾ ಟೀಸರ್ ಬಗ್ಗೆ ತಮ್ಮದೇ ಸ್ಟೈಲ್ ನಲ್ಲಿ ಜನರಿಗೆ ಸಿನಿಮಾ ಬಗ್ಗೆ ಹೇಳಿದ್ದಾರೆ . ಏನೋ ನನ್ನ ಕೈಲಾಗಿದ್ದು ಮಾಡಿ ನಿಮ್ಮ ಪಾದಗಳ ಮೇಲೆ ಹಾಕಿದ್ದೀನಿ . ದಯವಿಟ್ಟು ನನ್ನ ನಿಮ್ ಮನೆ ಮಗ ಅಂತಾನೋ ಇಲ್ಲ ನಿಮ್ಮ ಮನೆ ಬಾಡಿಗೆಗೆ ಇರೋರ ಮಗ ಅನ್ಕೊಂಡು ನೋಡಿ, ಹಾರೈಸಿ. ಇನ್ನು ಚಿಕ್ಕುಡ್ಗ ನಾನು ಏನೋ ಡೈರೆಕ್ಟರ್ ಹೇಳಿದ್ದು ಮಾಡಿದೀನಿ ಚೆನ್ನಾಗಿದ್ರೆ ಚಪ್ಪಾಳೆ ಹೊಡಿರಿ... ಸುಮಾರಾಗಿದ್ರೆ ಇನ್ನೊಂದೆರಡು ಸಲ ನೋಡ್ಕೊಂಡು ಸುಮ್ನಾಗಿ, ಹಾರೈಸೋದು ಮರಿಬೇಡಿ.. ಯಾಕಂಧ್ರೆ ಇದು ನಿಮ್ಮ ಸಿನಿಮಾ , ಕನ್ನಡಿಗರ ಗೆಲುವು ಎನ್ನುತ್ತಾ ಪ್ರಥಮ್ ತಮ್ಮ ಸಿನಿಮಾ ಟೀಸರ್ ಬಗ್ಗೆ ಮಾತನಾಡಿದರು.
ಪೂರ್ಣಿಮಾ ಮತ್ತು ಬೆತ್ತನಗೆರೆ ಖ್ಯಾತಿಯ ನಯನ ಸಿನಿಮಾದಲ್ಲಿ ಪ್ರಥಮ್ ಗೆ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಕಿರಿಕ್ ಕೀರ್ತಿ ಸಹ ವಿಶೇಷ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಸಿನಿಮಾಗೆ ಕಿರಣ್ ಶೆಟ್ಟಿ ನಿರ್ದೇಶನವಿದ್ದು, ಸುರೇಶ್ ಮತ್ತು ವೆಂಕಟಗೌಡ ಬಂಡವಾಳ ಹೂಡಿದ್ದಾರೆ. ರಾಜೇಶ್ ರಾಮನಾಥ್ ಸಂಗೀತವಿದೆ. ಸಿನಿಮಾ ಆದಷ್ಟೂ ಬೇಗ ಚಿತ್ರಮಂದಿರಗಳಿಗೆ ಲಗ್ಗೆಯಿಡಲಿದೆ.
Comments