ಕ್ರೇಜಿ ಕ್ವೀನ್ ರಕ್ಷಿತಾ ಕೋರಿಕೆಯನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಪೂರೈಸುತ್ತಾರಾ?

ಖಾಸಗಿ ಚಾನೆಲ್ವೊಂದರ ಡ್ಯಾನ್ಸ್ ರಿಯಾಲಿಟಿ ಶೋ ತೀರ್ಪುಗಾರರಾಗಿರುವ ರಕ್ಷಿತಾ ರಿಯಾಲಿಟಿ ಶೋ ಕಾರ್ಯಕ್ರಮದ ಸ್ಪರ್ಧಿಯಾಗಿರುವ ಚೆನ್ನಪ್ಪ ತಾವು ದರ್ಶನ್ ರನ್ನು ಭೇಟಿಯಾಗಬೇಕು ಎಂಬ ಆಸೆಯನ್ನು ರಕ್ಷಿತಾರ ಮುಂದೆ ಹೇಳಿಕೊಂಡಿದ್ದಾರೆ. ಈ ಕುರಿತು ರಕ್ಷಿತಾ ತಮ್ಮ ಫೇಸ್ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.
ಈ ಹಿಂದೆ ಕನ್ನಡ ಚಿತ್ರರಂಗಕ್ಕೆ ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಕ್ರೇಜಿ ಕ್ವೀನ್ ರಕ್ಷಿತಾ ಪ್ರೇಮ್ ಅವರು ಒಳ್ಳೆಯ ಸ್ನೇಹಿತರು ಎಂಬುದು ಗೊತ್ತಿದೆ. ಸದ್ಯ ರಕ್ಷಿತಾ ಅವರು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ.
ರಕ್ಷಿತಾ ಬೇಡಿಕೆ ಏನು ಗೊತ್ತಾ?
ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಇದು ನನ್ನ ಸ್ಪೆಶಲ್ ರಿಕ್ವೆಸ್ಟ್. ಈ ಫೋಟೋದಲ್ಲಿರುವನು ಚೆನ್ನಪ್ಪ. ಜಿ-ಕನ್ನಡ ಚಾನೆಲ್ನ ಸರಿಗಮಪ-11ರ ಸಂಗೀತ ಕಾರ್ಯಕ್ರಮದ ವಿಜೇತನಾಗಿದ್ದು, ಜೊತೆಗೆ ಒಳ್ಳೆಯ ಡ್ಯಾನ್ಸರ್. ನಿಮಗೆ ಕೋಟ್ಯಾಂತರ ಅಭಿಮಾನಿಗಳಿರುವುದು ನನಗೆ ಗೊತ್ತಿದೆ. ಆ ಅಭಿಮಾನಿಗಳಲ್ಲಿ ಈ ಚೆನ್ನಪ್ಪ ಕೂಡ ಒಬ್ಬನಾಗಿದ್ದಾನೆ. ನಿಮ್ಮನ್ನು ಭೇಟಿಯಾಗುವುದು ಚೆನ್ನಪ್ಪನ ಜೀವನದ ಗುರಿಯಾಗಿದೆ. ಪ್ಲೀಸ್ ದಯವಿಟ್ಟು ಈತನನ್ನು ಭೇಟಿಯಾಗಿ ಎಂದು ರಕ್ಷಿತಾ ಅವರು ಫೇಸ್ ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ.
Comments