ರಣವೀರ್-ದೀಪಿಕಾ ನಡುವೆ ಎಂಗೇಜ್ಮೆಂಟ್ ..?

ರಣವೀರ್ ಹಾಗೂ ದೀಪಿಕಾ ಈಗ ಇವರಿಬ್ಬರೂ ಎಂಗೇಜ್ಮೆಂಟ್ ಮಾಡಿಕೊಂಡಿದ್ಧಾರೆ ಎನ್ನಲಾಗುತ್ತಿದೆ. ಈ ಮಾತು ಕೇಳಿ ಬರಲು ದೀಪಿಕಾ ಬೆರಳಲ್ಲಿರುವ ರಿಂಗ್ ಎಲ್ಲರ ಅನುಮಾನಗಳಿಗೆ ಕಾರಣವಾಗಿದೆ.
ಬಾಲಿವುಡ್ ನಟ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ನಡುವೆ ಲವ್ ಬ್ರೇಕ್ ಅಪ್ ಆಗಿದೆ ಅಂತ ಹೇಳಲಾಗುತ್ತಿದೆ. ಈಗ ಈ ಇಬ್ಬರು ಎಂಗೇಜ್ಮೆಂಟ್ ಮಾಡಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.
ಅದಕ್ಕೆ ಪೂರಕ ಎಂಬಂತೆ ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಟಿ ದೀಪಿಕಾ ಕಾಣಿಸಿಕೊಂಡಿದ್ದರು. ಆಗ ಅವರ ಕೈ ಬೆರಳಲ್ಲಿ ಇದ್ದ ಉಂಗುರ ಎಲ್ಲರಲ್ಲಿ ಪ್ರಶ್ನೆ ಮೂಡಲು ಕಾರಣವಾಗಿತ್ತು. ಕೆಲವರು ದೀಪಿಕಾ ಎಂಗೇಜ್ ಮೆಂಟ್ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದರು. ಆದರೆ ಈ ಬಗ್ಗೆ ದಿಪೀಕಾ ಸ್ಪಷ್ಟಣೆ ನೀಡಬೇಕಿದೆ. ಒಟ್ಟಿನಲ್ಲಿ ಈ ಜೋಡಿಗಳು ಆದಷ್ಟು ಬೇಗ ಒಂದಾಗಲಿ ಎಂಬುದು ಎಲ್ಲರ ಆಶಯ.
Comments