ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡ್ರಾ ನಟಿ ದೀಪಿಕಾ ಪಡುಕೋಣೆ...!!

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತು ನಟ ರಣವೀರ್ ಸಿಂಗ್ ನಡುವಿನ ಲವ್ ಬ್ರೇಕ್ ಅಪ್ ಅಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ವದಂತಿಗಳ ಮಧ್ಯೆ ಈಗ ಈ ಜೋಡಿ ಗುಟ್ಟಾಗಿ ಎಂಗೇಜ್ ಮೆಂಟ್ ಮಾಡಿಕೊಂಡಿದೆ ಎನ್ನುವ ಮಾತುಗಳು ಕೂಡ ಕೇಳಿ ಬರುತ್ತಿವೆ.
ತೆರೆಮೇಲೆ ಮುದ್ದು ಜೋಡಿ ಎನಿಸಿಕೊಂಡಿರುವ ದಿಪೀಕಾ ಮತ್ತು ರಣ್ವೀರ್ ಸಿಂಗ್ ನಿಜ ಜೀವನದಲ್ಲೂ ಒಂದಾಗಿದ್ದಾರೆ ಎಂಬ ಅನುಮಾನ ಈಗ ಮೂಡುತ್ತಿದೆ. ಅದಕ್ಕೆ ಕಾರಣ ದಿಪೀಕಾ ಪಡುಕೋಣೆ ಅವರ ಕೈಯಲ್ಲಿರುವ ಉಂಗುರ.
ಹೌದು, ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದಕ್ಕೆ ನಟಿ ದೀಪಿಕಾ ಬಂದಿದ್ದರು. ಅವರ ಕೈಯಲಿದ್ದ ಉಂಗುರ ಎಲ್ಲರ ಗಮನ ಸೆಳೆಯಿತು. ಈ ರಿಂಗ್ ನೋಡಿ ಅನೇಕರು ಎಂಗೆಜ್ ಮೆಂಟ್ ರಿಂಗ್ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಇದೆಲ್ಲಾ ಎಷ್ಟರ ಮಟ್ಟಿಗೆ ನಿಜವೋ ಗೊತ್ತಿಲ್ಲ. ಆದ್ರೆ ದಿಪೀಕಾ ಮತ್ತು ರಣ್ವೀರ್ ಸಿಂಗ್ ಇಬ್ಬರು ತಮ್ಮ ಮಧ್ಯೆ ರಿಲೇಶನ್ ಷಿಪ್ ಇಲ್ಲ, ಎಲ್ಲವೂ ಮುರಿದು ಬಿದ್ದಿದೆ ಎನ್ನುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ. ಮತ್ತೊಂದೆಡೆ ಮೇಲ್ನೋಟಕ್ಕೆ ಹಾಗೆ ಕಾಣಿಸಿಕೊಂಡರೂ, ಅವರಿಬ್ಬರು ಚೆನ್ನಾಗಿದ್ದಾರೆ ಎನ್ನುತ್ತಿದ್ದಾರೆ.
Comments