ಚಾಲೆಂಜಿಂಗ್ ಸ್ಟಾರ್ ದರ್ಶನ್ 'ತಾರಕ್' ಚಿತ್ರದ ಟ್ರೇಲರ್ ಇಂದು ಬಿಡುಗಡೆ

ದರ್ಶನ್ ಅಭಿನಯದ 'ತಾರಕ್' ಸಿನಿಮಾದ ಟ್ರೇಲರ್ ಇಂದು ರಿಲೀಸ್ ಆಗಲಿದೆ. ಈ ಮೊದಲು ಚಿತ್ರತಂಡ ಟ್ರೇಲರ್ ಬಿಡುಗಡೆಯನ್ನು ಕಳೆದ ಗುರುವಾರ ಮಾಡುವ ಪ್ಲಾನ್ ಮಾಡಿತ್ತು. ಆದರೆ ತಾಂತ್ರಿಕ ತೊಂದರೆಯಿಂದಾಗಿ ಅದು ಸಾಧ್ಯವಾಗಿರಲಿಲ್ಲ.
ದರ್ಶನ್ ಅಭಿಮಾನಿಗಳು 'ತಾರಕ್' ಸಿನಿಮಾದ ಟ್ರೇಲರ್ ನೋಡುವುದಕ್ಕೆ ತುದಿಗಾಲಲ್ಲಿ ಕಾಯುತ್ತಿದ್ದಾರೆ. ಅಂತಹ ಅಭಿಮಾನಿಗಳಿಗೆ ಈಗ 'ತಾರಕ್' ದರ್ಶನ ನೀಡಲಿದ್ದಾನೆ. ಅಂದಹಾಗೆ, ಸಿನಿಮಾದ ಟ್ರೇಲರ್ ಇಂದು ಸಂಜೆ 4 ಗಂಟೆಗೆ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿದೆ.
'ತಾರಕ್' ಸಿನಿಮಾದ ಮೇಲೆ ದೊಡ್ಡ ನಿರೀಕ್ಷೆ ಇದೆ. ಮಿಲನ ಪ್ರಕಾಶ್ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದಾರೆ. ದರ್ಶನ್ ಅವರ ತಾತನ ಪಾತ್ರವನ್ನು ನಟ ದೇವರಾಜ್ ಮಾಡಿದ್ದಾರೆ. ನಾಯಕಿಯರಾಗಿ ಶಾನ್ವಿ ಶ್ರೀವತ್ಸವ ಮತ್ತು ಶೃತಿ ಹರಿಹರನ್ ಕಾಣಿಸಿಕೊಂಡಿದ್ದಾರೆ. ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಬಹು ನಿರೀಕ್ಷಿತ ಈ ಸಿನಿಮಾ ಇದೇ ತಿಂಗಳು 29 ರಂದು ಸಿನಿಮಾ ರಾಜ್ಯಾದಂತ್ಯ ಬಿಡುಗಡೆ ಆಗಲಿದೆ.
Comments