ಕತ್ರೀನಾಗೆ ವಾರ್ ಶಿಪ್ ಹೆಲಿಕಾಪ್ಟರ್ ಗಿಫ್ಟ್ ಕೊಟ್ಟವರು ಯಾರು..?

' ಟೈಗರ್ ಝಿಂದಾ ಹೈ ' ಸಿನಿಮಾದಲ್ಲಿ ಕತ್ರಿನಾಳ ನಟನೆ, ನಿರ್ಮಾಪಕ ಆದಿತ್ಯಾ ಚೋಪ್ರಾಗೆ ಖುಷಿ ಕೊಟ್ಟಿದೆಯಂತೆ. ಹೀಗಾಗಿ ಇವರು ಕತ್ರೀನಾಗೆ ವಾರ್ ಶಿಪ್ ಹೆಲಿಕಾಪ್ಟರ್ ಒಂದನ್ನ ಗಿಫ್ಟ್ ನೀಡಿದ್ದಾರೆ. ಈ ಬಗ್ಗೆ ಸ್ವತಹ ಕತ್ರೀನಾ ಕೈಫ್ ವೀಡಿಯೋವೊಂದನ್ನ ಮಾಡಿ ಶೇರ್ ಮಾಡಿದ್ದು, ಇದು ಸಾಕಷ್ಟು ಕುತೂಹಲಗಳಿಗೆ ಎಡೆಮಾಡಿಕೊಟ್ಟಿದೆ.
ಬಾಲಿವುಡ್ ನಟಿ ಕತ್ರೀನಾ ಕೈಫ್ ಸದ್ಯ ' ಟೈಗರ್ ಝಿಂದಾ ಹೈ ' ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಸಲ್ಮಾನ್ ಖಾನ್ ನಾಯಕ ನಟನಾಗಿ ಅಭಿನಯಿಸುತ್ತಿರುವ ಚಿತ್ರ ಇದು.' ಟೈಗರ್ ಜಿಂದಾ ಹೈ' ಚಿತ್ರ ಈ ಹಿಂದೆ ಸಲ್ಲು ಮತ್ತು ಕ್ಯಾಟ್ ಕಾಂಬಿನೇಷನ್ ನಲ್ಲಿ ಮೂಡಿಬಂದಿದ್ದ 'ಏಕ್ ಥಾ ಟೈಗರ್' ಸೀಕ್ವೆಲ್ ಸಿನಿಮಾವಾಗಿದೆ.
ಈ ಚಿತ್ರದಂತೆಯೇ ಈಗ ಮಾಜಿ ಕಪಲ್ಸ್ ಮತ್ತೆ ಕಮಾಲ್ ಮಾಡುವ ಭರವಸೆ ಮೂಡಿಸಿದ್ದಾರೆ. ಕೆಲದಿನಗಳ ಹಿಂದೆಯೇ ಬಿಡುಗಡೆ ಆಗಿದ್ದ 'ಟೈಗರ್ ಜಿಂದಾ ಹೈ' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಸಲ್ಲು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿತ್ತು.
Comments