2018 ರ ಆಸ್ಕರ್ ಪ್ರಶಸ್ತಿಗೆ ಆಯ್ಕೆಯಾದ ನ್ಯೂಟನ್ ಚಿತ್ರಕ್ಕೆ ಸರ್ವ ಸಮ್ಮತ

22 Sep 2017 3:27 PM | Entertainment
302 Report

ಆಸ್ಕರ್ ಪ್ರಶಸ್ತಿಗೆ ಚಿತ್ರಗಳನ್ನು ಆಯ್ಕೆ ಮಾಡುವ ಸಂಬಂಧ ಫಿಲ್ಮ್ ಫೆಡರೇಷನ್ ಆಫ್ ಇಂಡಿಯಾ ಸಭೆಯಲ್ಲಿ ಸದಸ್ಯರು ನ್ಯೂಟನ್ ಚಿತ್ರವನ್ನು ಒಮ್ಮತದಿಂದ ಆಯ್ಕೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಅಮಿತ್ ವಿ.ಮಸೂರ್ ಕರ್ ನಿರ್ದೇಶನದ ಮತ್ತು ರಾಜ್ ಕುಮಾರ್ ರಾವ್ ನಟನೆಯ ನ್ಯೂಟನ್ ಚಿತ್ರ ಭಾರತದಿಂದ ಅಧಿಕೃತವಾಗಿ ಆಯ್ಕೆಯಾಗಿದೆ.

ನೀವು ಬದಲಾಗದೆ ಇದ್ದಲ್ಲಿ, ಯಾವುದೂ ಬದಲಾಗದು' ಎಂಬ ಸಂದೇಶ ಸಾರಲಾಗಿದ್ದು, ಚಿತ್ರದ ಕಥಾನಾಯಕ ನ್ಯೂಟನ್ (ರಾಜ್ ಕುಮಾರ್), ಆದರ್ಶಗಳಲ್ಲಿ ನಂಬಿಕೆಯಿಟ್ಟ ವ್ಯಕ್ತಿಯಾಗಿರುತ್ತಾನೆ. ನಕ್ಸಲೀಯರ ಪ್ರಾಬಲ್ಯದ ಪ್ರದೇಶಗಳಲ್ಲಿ ಆತ ಚುನಾವಣಾ ಕರ್ತವ್ಯಕ್ತೆ ತೆರಳಿದಾಗ ಉಂಟಾಗುವ ಘಟನಾವಳಿಗಳನ್ನು ಚಿತ್ರದಲ್ಲಿ ಅತ್ಯಂತ ಸ್ವಾರಸ್ಯಕರವಾಗಿ ತೋರಿಸಲಾಗಿದೆಯಂತೆ.
ನಕ್ಸಲರ ಬೆದರಿಕೆಯಿಂದಾಗಿ, ಜೀವಭಯದಿಂದ ಮತದಾನದಲ್ಲಿ ಪಾಲ್ಗೊಳ್ಳದ ಗ್ರಾಮಸ್ಥರು, ಅರ್ಹ ಅಭ್ಯರ್ಥಿಗೆ ಮತ ಚಲಾಯಿಸಲಾಗದೆ ಅನುಭವಿಸುವ ಕಷ್ಟವನ್ನು ಈ ಚಿತ್ರದಲ್ಲಿ ಮಾರ್ಮಿಕವಾಗಿ ಬಿಂಬಿಸಲಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ನ್ಯೂಟನ್ ಚಿತ್ರವು ಮತದಾನ ಒಂದು ಪವಿತ್ರ ಕರ್ತವ್ಯವೆಂದು ಪರಿಗಣಿಸದ ವ್ಯಕ್ತಿಗಳಿಗೆ ಎಚ್ಚರಿಕೆಯ ಕರೆಗಂಟೆಯಾಗಲಿದೆಯೆಂದು ನಾಯಕನಟ ರಾಜ್ ಕುಮಾರ್ ರಾವ್ ಹೇಳಿಕೊಂಡಿದ್ದಾರೆ.

Edited By

Hema Latha

Reported By

Madhu shree

Comments