ಕಿಚ್ಚಾ ಸುದೀಪ್ ಜೊತೆ ಪವರ್ ಸ್ಟಾರ್ ಪುನೀತ್ ಸಿನಿಮಾ ಮಾಡ್ತಾರಾ?

ಒಂದೇ ಚಿತ್ರದಲ್ಲಿ ಸುದೀಪ್ ಮತ್ತು ಪುನೀತ್ ರಾಜ್ ಕುಮಾರ್ ಕಾಣಿಸಿಕೊಳ್ಳುವ ಸುದ್ದಿಯೊಂದು ಬಂದಿದೆ.ಪುನೀತ್ ಮತ್ತು ಸುದೀಪ್ ಒಳ್ಳೆಯ ಗೆಳೆಯರಾಗಿದ್ದರು ಸಹ ಈ ವರೆಗೆ ಇವರಿಬ್ಬರು ಒಟ್ಟಿಗೆ ಸಿನಿಮಾ ಮಾಡುವ ಅವಕಾಶ ಬಂದಿರಲಿಲ್ಲ.
ಆದರೆ ಇದೀಗ ಒಂದು ಹೊಸ ಚಿತ್ರದಲ್ಲಿ ಸುದೀಪ್ ಮತ್ತು ಪುನೀತ್ ಜೋಡಿಯಾಗಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ. ಅಂದಹಾಗೆ, ಈ ಇಬ್ಬರು ನಟರನ್ನು ಒಂದೇ ಚಿತ್ರದಲ್ಲಿ ಸೇರಿಸುವ ಪ್ಲಾನ್ ಮಾಡಿರುವುದು ನಿರ್ಮಾಪಕ ಸಿ.ಆರ್.ಮನೋಹರ್.ನಿರ್ಮಾಪಕ ಸಿ.ಆರ್.ಮನೋಹರ್ ತಮ್ಮ ಹೊಸ ಚಿತ್ರವನ್ನು ಕನ್ನಡದ ಸ್ಟಾರ್ ನಟರಾದ ಸುದೀಪ್ ಮತ್ತು ಪುನೀತ್ ರಾಜ್ ಕುಮಾರ್ ಕಾಂಬಿನೇಶನ್ ನಲ್ಲಿ ಮಾಡುವ ತಯಾರಿ ನಡೆಸಿದ್ದಾರೆ.
ತಮಿಳಿನ 'ವಿಕ್ರಂವೇದ' ಚಿತ್ರವನ್ನು ಕನ್ನಡದಲ್ಲಿ ಮಾಡುವ ಆಸೆ ಹೊಂದಿರುವ ಸಿ.ಆರ್.ಮನೋಹರ್ ಈ ಚಿತ್ರದಲ್ಲಿ ಸುದೀಪ್ ಮತ್ತು ಪುನೀತ್ ರಾಜ್ ಕುಮಾರ್ ಜೋಡಿಯನ್ನು ಸೇರಿಸುವ ಪ್ಲಾನ್ ಮಾಡಿದ್ದಾರೆ. ನಿರ್ಮಾಪಕ ಸಿ.ಆರ್.ಮನೋಹರ್ 'ವಿಕ್ರಂ ವೇದ' ಚಿತ್ರದ ರೀಮೇಕ್ ರೈಟ್ಸ್ ಪಡೆದ ನಂತರ ಈ ಬಗ್ಗೆ ಪುನೀತ್ ಮತ್ತು ಸುದೀಪ್ ಜೊತೆ ಮಾತುಕತೆ ನಡೆಸಲಿದ್ದಾರಂತೆ.
Comments