ಪೂರಿ ಜಗನ್ನಾಥ್ ಚಿತ್ರದಲ್ಲಿ ಮುಂಗಾರು ಹುಡುಗಿ ನೇಹಾ ಶೆಟ್ಟಿ!

'ಮುಂಗಾರು ಮಳೆ 2' ಸಿನಿಮಾದಲ್ಲಿ ನಟಿಸಿದ್ದ ನೇಹಾ ಶೆಟ್ಟಿ ಆ ಚಿತ್ರದ ಬಳಿಕ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಂಡಿರಲಿಲ್ಲ. ಆದರೆ ಇದೀಗ ನೇಹಾ ಸೈಲೆಂಟ್ ಆಗಿ ಟಾಲಿವುಡ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ.
ತೆಲುಗಿನ ಸ್ಟಾರ್ ನಿರ್ದೇಶಕ ಪೂರಿ ಜಗನ್ನಾಥ್ ನಿರ್ದೇಶಕದ ಹೊಸ ಸಿನಿಮಾದಲ್ಲಿ ನೇಹಾ ನಟಿಸುವ ಅವಕಾಶ ಪಡೆದಿದ್ದಾರೆ. ವಿಶೇಷ ಅಂದರೆ ಪೂರಿ ನಿರ್ದೇಶಕದ ಈ ಚಿತ್ರದ ನಾಯಕ ಅವರ ಮಗ ಆಕಾಶ್.
ಚಿತ್ರರಂಗಕ್ಕೆ ಸಾಕಷ್ಟು ಜನ ಹೀರೋ ಹಿರೋಯಿನ್ ಗಳನ್ನು ಪೂರಿ ಜಗನಾಥ್ ಲಾಂಚ್ ಮಾಡಿದ್ದಾರೆ. ಹೀಗೆ ಹೊಸ ನಟರನ್ನು ಹುಟ್ಟು ಹಾಕುವುದರಲ್ಲಿ ಪೂರಿ ಎತ್ತಿದ ಕೈ. ಈಗಾಗಲೇ ಚಿತ್ರರಂಗಕ್ಕೆ ಅನೇಕರನ್ನು ಪರಿಚಯಿಸಿರುವ ಪೂರಿ ಈಗ ತಮ್ಮ ಮಗ ಆಕಾಶ್ ಅವರನ್ನು ಲಾಂಚ್ ಮಾಡಲಿದ್ದಾರೆ.ಇಷ್ಟು ದಿನ ಒಂದು ಒಳ್ಳೆಯ ಸಿನಿಮಾಗಾಗಿ ಕಾಯುತ್ತಿದ್ದ ನೇಹಾಗೆ ಈಗ ಒಂಪರ್ ಆಫರ್ ಸಿಕ್ಕಿದೆ.
Comments