ಬಹುನಿರೀಕ್ಷಿತ ಪದ್ಮಾವತಿ ಚಿತ್ರದ ಫಸ್ಟ್ ಲುಕ್ ಬಿಡುಗಡೆ

ಬಾಲಿವುಡ್‍ನ ಬಹುನಿರೀಕ್ಷಿತ ಪದ್ಮಾವತಿ ಚಿತ್ರದ ಫಸ್ಟ್ ಲುಕ್ ಬಿಡುಗಡೆಯನ್ನು ದೀಪಿಕಾ ಪಡುಕೋಣೆ, ರಣ್‍ವೀರ್ ಸಿಂಗ್ ಮತ್ತು ಶಾಹಿದ್ ಕಪೂರ್ ತಮ್ಮ ಟ್ವಿಟರ್ ನಲ್ಲಿ ಪದ್ಮಾವತಿ ಚಿತ್ರದ ಲೋಗೋವನ್ನು ಹಾಕಿ, ನಾಳೆ ಪದ್ಮಾವತಿ ಬರುತ್ತಿದ್ದಾಳೆ ಎಂದು ಪೋಸ್ಟ್ ಮಾಡಿದ್ದಾರೆ .
ಪದ್ಮಾವತಿ ಚಿತ್ರದಲ್ಲಿ ದೀಪಿಕಾ ಪಡುಕೋಣೆ ರಾಣಿ ಪದ್ಮಾವತಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಶಾಹಿದ್ ಕಪೂರ್ ರಾಣಿ ಪದ್ಮಾವತಿಯ ಪತಿಯಾಗಿ ಕಾಣಿಸಿಕೊಳ್ಳಲಿದ್ದು, ಅಲ್ಲಾವುದ್ದಿನ್ ಖಿಲ್ಜಿಯಾಗಿ ರಣ್‍ವೀರ್ ಸಿಂಗ್ ನಟಿಸಿದ್ದಾರೆ. ಈ ಚಿತ್ರವು ಡಿಸೆಂಬರ್ 1ರಂದು ಬಿಡುಗಡೆಯಾಗಲಿದೆ. ದೀಪಿಕಾ ರಾಜಸ್ಥಾನ ಶೈಲಿಯ ಉಡುಪಿನಲ್ಲಿ ಕಾಣಿಸಿದ್ದಾರೆ. ದೇವಸ್ಥಾನದ ಗರ್ಭಗುಡಿಯಲ್ಲಿ ತದೇಕ ಚಿತ್ತದ ನೋಟವನ್ನು ಪೋಸ್ಟರ್ ನಲ್ಲಿ ಕಾಣಬಹುದಾಗಿದೆ. ಇನ್ನೊಂದು ಕಡೆ ಕೈ ಮುಗಿದು ನಿಂತಿರುವ ಫೋಟೋವನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಅಭಿಮಾನಿಗಳು ಕೂತುಹಲದಿಂದ ಫಸ್ಟ್ ಲುಕ್ ಗಾಗಿ ಕಾದಿದ್ದರು. ಇಂದು ಫಸ್ಟ್ ಲುಕ್ ಬಿಡುಗಡೆಯಾಗಿದ್ದು, ರಣ್‍ವೀರ್ ಮತ್ತು ಶಾಹಿದ್ ಅಭಿಮಾನಿಗಳಲ್ಲಿ ಕೊಂಚ ನಿರಾಸೆಯನ್ನುಂಟು ಮಾಡಿದೆ. ಕಾರಣ ಪೋಸ್ಟರ್ ನಲ್ಲಿ ರಣ್‍ವೀರ್ ಮತ್ತು ಶಾಹಿದ್ ಕಾಣಿಸಿಕೊಂಡಿಲ್ಲ.
Comments