ದಸರಾದ ಪ್ರಮುಖ ಆಕರ್ಷಣೆಯಾದ ಯುವ ದಸರಾಕ್ಕೆ ಸೆ.22 ರಿಂದ ಚಾಲನೆ





ಯುವ ದಸರಾಕ್ಕೆಸೆಪ್ಟೆಂಬರ್ 22 ರಂದು ಶುಕ್ರವಾರ ಸಂಜೆ 6 ಗಂಟೆಗೆ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಹಾಗೂ ಲೋಕೋಪಯೋಗಿ ಸಚಿವ ಹೆಚ್.ಸಿ. ಮಹದೇವಪ್ಪ ಉದ್ಘಾಟಿಸಲಿದ್ದಾರೆ. ಮಜಾ ಟಾಕೀಸ್ ಖ್ಯಾತಿಯ ಸೃಜನ್ ಲೋಕೇಶ್ ಮತ್ತು ನಟಿ ರಚಿತಾ ರಾಮ್ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕಾರ್ಯಕ್ರಮಗಳ ವಿವಿರ:
* ಸೆಪ್ಟೆಂಬರ್ .22ರಂದು ಸಂಜೆ 6 ರಿಂದ 7ರ ವರೆಗೆ ಯುವ ಸಂಭ್ರಮದಲ್ಲಿ ಪಾಲ್ಗೊಂಡು ಆಯ್ಕೆಯಾದ ಕಾಲೇಜುಗಳಿಂದ ನೃತ್ಯ ಪ್ರದರ್ಶನವಿದೆ. ಸಂಜೆ 7 ರಿಂದ 8 ರವರೆಗೆ ರಾಜ್ಯದ ವಿವಿಧ ಭಾಗಗಳಿಂದ ಬರುವ ಖ್ಯಾತ ಕಲಾವಿದರ ತಂಡಗಳಿಂದ ನೃತ್ಯ ಮತ್ತು ಸಂಗೀತ ಕಾರ್ಯಕ್ರಮ ನಡೆಯಲಿದೆ.
* ಸೆಪ್ಟೆಂಬರ್ 22 ರಂದು 8 ಗಂಟೆಗೆ ದಿಲ್ ಸೆ ದಿಲ್ ಖ್ಯಾತಿಯ ಫಲಾಕ್ ಮಚ್ಚಲ್ ಸಹೋದರರಿಂದ ಕಾರ್ಯಕ್ರಮವಿದೆ. ಸೆಪ್ಟೆಂಬರ್ 23 ರಂದು ಬಾಲಿವುಡ್ ಹಿನ್ನಲೆ ಗಾಯಕ ಕನ್ನಡದ ಪ್ರತಿಭೆ ನಕಾಶ್ ಅಜೀಜ್ ಅವರ ಕಾರ್ಯಕ್ರಮವಿದೆ.
* ಸೆಪ್ಟೆಂಬರ್ 24 ರಂದು ಕೋಕ್ ಕಲಾ ಕಂಪನಿಯ ಪ್ರಾಯೋಜಕತ್ವದಲ್ಲಿ ಕೋಕ್ ಸ್ಟುಡಿಯೋ ಪ್ಯಾನನ್ ಅವರ ಕಾರ್ಯಕ್ರಮ.
* ಸೆಪ್ಟೆಂಬರ್ 25 ರಂದು ಟಿವಿಎಸ್ ಮತ್ತು ಕೆನರಾಬ್ಯಾಂಕ್ ಪ್ರಾಯೋಜಕತ್ವದಿಂದ ಅರ್ಜುನ್ ಜನ್ಯರಿಂದ ಸಂಗೀತ ಕಾರ್ಯಕ್ರಮವಿದೆ.
* ಸೆಪ್ಟೆಂಬರ್ 26 ರಂದು ಬಾಲಿವುಡ್ ಯೂತ್ಸ್ ದಿವ್ಯಕುಮಾರ್ ಮತ್ತು ಶಿಫಾಲಿ ಅವರ ಕಾರ್ಯಕ್ರಮ. ಸೆ.27 ರಂದು ರೆಡ್ ಬುಲ್ ಟೂರ್ ಬಸ್ (ರೆಡ್ ಬುಲ್ ಪ್ರಾಯೋಜಕತ್ವ) ಮೈಸೂರಿನ ಪ್ರಖ್ಯಾತ ವಾಸ್ತು ದೀಕ್ಷಿತ್ ಅವರ ಸ್ವರಾಂತ್ಯ ತಂಡ ಹಾಗೂ ಬಾಲಿವುಡ್ ಗಾಯಕ ಸಿದ್ದಾರ್ಥ ಮಹದೇವನ್ ಅವರ ಕಾರ್ಯಕ್ರಮ.
* ಸೆ.28 ರಂದು ಸ್ಯಾಂಡಲ್‍ವುಡ್ (ಪ್ರಾಯೋಜಕತ್ವ) ಧ್ರುವ ಸರ್ಜಾ, ಇತರ ಕಲಾವಿದರ ಕಾರ್ಯಕ್ರಮವಿದೆ. ಸೆಪ್ಟೆಂಬರ್ 29 ರಂದು ಗಂಧದಗುಡಿ ಸ್ಟಾರ್‍ನೈಟ್ (ಪ್ರಾಯೋಜಕತ್ವ) ದರ್ಶನ್ ಮತ್ತು ಇತರರಿಂದ ಕಾರ್ಯಕ್ರಮ.
Comments