ಬೆಳ್ಳಿ ಪರೆದೆ ಮೇಲೆ ರಾರಾಜಿಸಲಿರುವ ಜೂಲನ್ ಗೋಸ್ವಾಮಿ ಬಯೋಪಿಕ್!
ಟೀಂ ಇಂಡಿಯಾದ ವೇಗಿ ಜೂಲನ್ ಗೋಸ್ವಾಮಿ ಅವರ ಜೀವನ ಚರಿತ್ರೆಯ ಸಿನಿಮಾ ನಿರ್ಮಾಣವಾಗುತ್ತಿದೆ. ಬಾಲಿವುಡ್ ನಲ್ಲಿ ಚಿತ್ರ ತಯಾರಾಗುತ್ತಿದ್ದು ಖ್ಯಾತ ಬಂಗಾಳಿ ನಿರ್ದೇಶಕ ಸುಶಾಂತ್ ದಾಸ್ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇನ್ನು ಚಿತ್ರಕ್ಕೆ ಚಾಕ್ದಾಗ ಎಕ್ಸ್ ಪ್ರೆಸ್ ಎಂದು ಟೈಟಲ್ ಇಡಲಾಗಿದೆ.
ಜೂಲನ್ ಅವರ ತವರು ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಿಂದ ಲಾರ್ಡ್ಸ್ ವರೆಗೆ ಅವರ ವೃತ್ತಿಜೀವನದ ಸಾಧನೆ ಕುರಿತು ಸಿನಿಮಾ ನಿರ್ಮಿಸಲಾಗುತ್ತಿದೆ. ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹಾಗೂ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಜೀವನಾಧಾರಿತ ಸಿನಿಮಾಗಳು ಬೆಳ್ಳಿ ಪರೆದೆ ಮೇಲೆ ರಾರಾಜಿಸಿದ ನಂತರ ಇದೀಗ ಟೀಂ ಇಂಡಿಯಾದ ವೇಗಿ ಜೂಲನ್ ಗೋಸ್ವಾಮಿ ಅವರ ಜೀವನ ಚರಿತ್ರೆಯ ಸಿನಿಮಾ ನಿರ್ಮಾಣವಾಗುತ್ತಿದೆ. ಮುಂದಿನ ಏಪ್ರಿಲ್ ನಲ್ಲಿ ಚಿತ್ರ ಸೆಟ್ಟೇರಲಿದೆ. ಜೂಲನ್ ಪಾತ್ರಕ್ಕಾಗಿ ನಟಿಯ ಆಯ್ಕೆಯಲ್ಲಿ ಚಿತ್ರ ತಂಡ ತೊಡಗಿದ್ದು ಕೆಲ ಬಾಲಿವುಡ್ ನಟಿಯರನ್ನು ಪಟ್ಟಿ ಮಾಡಲಾಗುತ್ತಿದೆ ಎಂದು ಸುಶಾಂತ್ ತಿಳಿಸಿದ್ದಾರೆ.
Comments