ಪತ್ರಕರ್ತೆ ಗೌರಿ ಲಂಕೇಶ್ ಮರ್ಡರ್ ಸಿನಿಮಾವಾಗಿ ಮೂಡಿ ಬರಲಿದೆ

ನಿರ್ದೇಶಕ ಎಎಂಆರ್ ರಮೇಶ್ ಗೌರಿ ಲಂಕೇಶ್ ಮರ್ಡರ್ ಕೇಸ್ ಕಥೆಯನ್ನಾಧರಿಸಿ ಕ್ರೈಂ ಆಧಾರಿತ ಸಿನಿಮಾ ಮಾಡಲು ನಿರ್ಧರಿಸಿದ್ದಾರೆ. ಗೌರಿ ಹತ್ಯೆಯ ಪ್ರಕರಣದ ಜೊತೆಗೆ ರಮೇಶ್, ಕಲ್ಬುರ್ಗಿ, ಪನ್ಸಾರೆ ಕೊಲೆ ಪ್ರಕರಣಗಳ ಮೇಲೂ ಬೆಳಕು ಚೆಲ್ಲಲಿದ್ದಾರೆ. ಆದರೆ ನನ್ನ ಫೋಕಸ್ ಗೌರಿಯನ್ನು ಯಾರು ಕೊಂದರು ಎಂಬುದರ ಬಗ್ಗೆಯಾಗಿದೆ ಎಂದು ಹೇಳಿದ್ದಾರೆ.
ಐಪಿಎಸ್ ಅಧಿಕಾರಿ ಡಿ.ರೂಪಾ ಅವರ ಜೀವನ ಚರಿತ್ರೆ ಆಧರಿತ ಚಿತ್ರ ತಯಾರಿಸುತ್ತಿದ್ದು, ಇದೇ ವೇಳೆ ಗೌರಿ ಲಂಕೇಶ್ ಕುರಿತ ಸಿನಿಮಾ ಮಾಡಲು ರಿಸರ್ಚ್ ಆರಂಭಿಸಿದ್ದಾರೆ. ನಿರ್ದೇಶಕ ಎಎಂಆರ್ ರಮೇಶ್ ಅವರಿಗೆ ಗೌರಿ ಲಂಕೇಶ್ ಆತ್ಮೀಯರಾಗಿದ್ದರು. ನಾನು ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಜೊತೆ ಮೊನಾಲಿಸಾ ಸಿನಿಮಾದಲ್ಲಿ ಕೆಲಸ ಮಾಡಿದ್ದೆ. ಆ ವೇಳೆ ನಾನು ಪ್ರತಿದಿನ ಗೌರಿ ಅವರನ್ನು ಭೇಟಿ ಮಾಡುತ್ತಿದ್ದೆ, ಇಂದ್ರಜಿತ್ ಅವರ ಕಚೇರಿ ಪಕ್ಕದಲ್ಲೇ ಗೌರಿ ಅವರ ಕಚೇರಿಯೂ ಇತ್ತು, ನನ್ನ ಕೆಲಸದ ಬಗ್ಗೆ ಆಕೆ ಯಾವಾಗಲೂ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದರು, ಆದರೆ ಆಕೆ ರಕ್ತದ ಮಡುವಿನಲ್ಲಿ ಬಿದ್ದಿದ್ದು ನನಗೆ ಆಘಾತ ತಂದಿದೆ. ಆಕೆ ಕೊಲೆಯಾಗಿದ್ದಾರೆ ಎಂಬುದನ್ನು ನನ್ನಿಂದ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ರಮೇಶ್ ಪ್ರತಿಕ್ರಿಯಿಸಿದ್ದಾರೆ. ಕೂಡಲೇ ನಾನು ಯಾವುದೇ ತೀರ್ಮಾನಕ್ಕೆ ಬರುವುದಿಲ್ಲ, ತನಿಖೆ ಮುಗಿಯುವವರೆಗೂ ನಾನು ಕಾಯುತ್ತೇನೆ, ಕಥೆಯ ಬಗ್ಗೆ ಮಾತ್ರ ನಾನು ಸಿನಿಮಾ ಮಾಡುತ್ತಿದ್ದೇನೆ, ಆದರೆ ಅದಕ್ಕಿಂತ ಹೆಚ್ಚಾಗಿ ಗೌರಿ ನನ್ನ ಸ್ನೇಹಿತೆ ಎಂದು ವಿವರಿಸಿದ್ದಾರೆ.
Comments