ಗೋಕರ್ಣದಲ್ಲಿರಬೇಕಿದ್ದ ನಟಿ ಪಾರೂಲ್ ಆಸ್ಪತ್ರೆಯಲ್ಲಿ

ಬೆಂಗಳೂರು: ನಟಿ ಪಾರೂಲ್ ಯಾದವ್ ಕ್ವೀನ್ ಚಿತ್ರದ ರಿಮೇಕ್ ಆಗಿರುವ 'ಬಟರ್ ಫ್ಲೈ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆದ್ರೆ ಪಾರುಲ್ ಸಿಕ್ಕಾಪಟ್ಟೆ ಜ್ವರದಿಂದ ಬಳಲುತ್ತಿದ್ದಾರಂತೆ.
ಬೆಂಗಳೂರು: ನಟಿ ಪಾರೂಲ್ ಯಾದವ್ ಕ್ವೀನ್ ಚಿತ್ರದ ರಿಮೇಕ್ ಆಗಿರುವ 'ಬಟರ್ ಫ್ಲೈ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆದ್ರೆ ಪಾರುಲ್ ಸಿಕ್ಕಾಪಟ್ಟೆ ಜ್ವರದಿಂದ ಬಳಲುತ್ತಿದ್ದಾರಂತೆ.ಮುಂಬೈನಲ್ಲಿ ಮಳೆ ಮತ್ತು ಬಿಸಿಲು ಏಕಕಾಲಕ್ಕೆ ಆಗುತ್ತಿರುವ ಕಾರಣ ಹವಾಮಾನದಲ್ಲಿ ಬದಲಾವಣೆಯಿಂದಾಗಿ ಆರೋಗ್ಯವು ಕೈ ಕೊಟ್ಟಿದೆ.
ನಟಿಗೆ ಕಾಯಿಲೆ ಇದ್ದರೆ ಏನು ಮಾಡೋದು? ಚಿತ್ರ ನಿರ್ದೇಶಕರು ಪಾರುಲ್ ಗಾಗಿ ಕಾಯಲೇ ಬೇಕು. ಅಂದಹಾಗೆ ಗೋಕರ್ಟ್ ದಲ್ಲಿರಬೇಕಿದ್ದ ನಟಿ ಪಾರುಲ್ ಆಸ್ಪತ್ರೆಯಲ್ಲಿದ್ದಾರೆ. ಚಿತ್ರದ ಶೂಟಿಂಗ್ನಲ್ಲಿ ಭಾಗಿಯಾಗಿರಬೇಕಿತ್ತು. ಪಾರುಲ್ ಅನುಪಸ್ಥಿತಿಯಿಂದಾಗಿ ಶೂಟಿಂಗ್ ಮುಂದೂಡಲಾಗಿದೆ. ಇದೇ ತಿಂಗಳು ಸೆಪ್ಟೆಬರ್ 25 ರಂದು ಗೋಕರ್ಣದಲ್ಲಿ ಶೂಟಿಂಗ್ ಗೆ ತಯಾರಿ ಮಾಡಿಕೊಳ್ಳಲಾಗಿತ್ತು. ಆದರೆ ನಟಿಯೇ ಕಾಯಿಲೆ ಬಿದ್ದರೆ ಏನು ಮಾಡಕಾಗುತ್ತೆ ? ಆದ ಕಾರಣ ನಿರ್ದೇಶಕ ರಮೇಶ್ ಅರವಿಂದ್ ಶೂಟಿಂಗ್ ಮುಂದೂಡಿದ್ದಾರೆ.
Comments