ಕುರುಕ್ಷೇತ್ರದಲ್ಲಿ ದರ್ಶನ್ ನಾಯಕಿಯಾಗಿ ರಮ್ಯಾ!!



ಬೆಂಗಳೂರು: ಚಂದನವನದ ಬಹುನಿರೀಕ್ಷಿತ ಸಿನಿಮಾ `ಮುನಿರತ್ನ ಕುರುಕ್ಷೇತ್ರ’ದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ಗೆ ನಾಯಕಿಯಾಗಿ ಕೇರಳದ ಬೆಡಗಿ ರಮ್ಯಾ ನಂಬೀಸನ್ ಕಾಣಿಸಿಕೊಳ್ಳಲಿದ್ದಾರೆ.
ಹೌದು, ಇದೂವರೆಗೂ ದರ್ಶನ್ ಗೆ ನಾಯಕಿಯಾಗಿ ತೆಲಗುವಿನ ರೆಜಿನಾ ಕ್ಯಾಸಂಡ್ರಾ ನಟಿಸಲಿದ್ದಾರೆ ಎಂಬ ಸುದ್ದಿಯೊಂದು ಹರಿದಾಡಿತ್ತು. ಈ ಕುರಿತು ರೆಜಿನಾ ಕೂಡ ತಾವು ಕುರುಕ್ಷೇತ್ರದಲ್ಲಿ ನಟಿಸುವುದಾಗಿ ಹೇಳಿಕೊಂಡಿದ್ದರು. ಆದರೆ ಈಗ ರೆಜಿನಾ ಸ್ಥಾನಕ್ಕೆ ರಮ್ಯಾ ಎಂಟ್ರಿ ಕೊಟ್ಟಿದ್ದಾರೆ. ಈ ನಡುವೆ ಮೊನ್ನೆಯಷ್ಟೆ ನೀರ್ ದೋಸೆ ಬೆಡಗಿ ಹರಿಪ್ರಿಯಾ ಕುರುಕ್ಷೇತ್ರದಲ್ಲಿ ದರ್ಶನ್ ಗೆ ಜೊತೆಯಾಗಿ ನಟಿಸಿ ಹೋಗಿದ್ದಾರೆ.
ಸಿನಿಮಾದ ಕುಂತಿ ಪಾತ್ರಕ್ಕಾಗಿ ಹಿರಿಯ ನಟಿ ಲಕ್ಷ್ಮೀ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಲಕ್ಷ್ಮೀ ಖಾಸಗಿ ಚಾನೆಲ್‍ವೊಂದರ ರಿಯಾಲಿಟಿ ಶೋ ತೀರ್ಪುಗಾರರಾಗಿದ್ದು, ಹಾಗಾಗಿ ಕುಂತಿ ಪಾತ್ರಕ್ಕೆ ಭಾರತಿ ವಿಷ್ಣುವರ್ಧನ್ ಜೀವ ತುಂಬಲಿದ್ದಾರೆ.
Comments