ಶೀರ್ಘದಲ್ಲೇ 'ಪಾದರಸ' ಚಿತ್ರ ಬಿಡುಗಡೆ

ಮುಂಬೈ : ಹೃಷಿಕೇಶ್ ಜಂಬಗಿ ನಿರ್ದೇಶನದ, ನಟ ಸಂಚಾರಿ ವಿಜಯ್ ಅಭಿನಯಿಸುತ್ತಿರುವ 'ಪಾದರಸ' ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಶೀರ್ಘದಲ್ಲೇ ತೆರೆಗೆ ಬರಲು ಸಜ್ಜಾಗುತ್ತಿದೆ.
ಮುಂಬೈ : ಹೃಷಿಕೇಶ್ ಜಂಬಗಿ ನಿರ್ದೇಶನದ, ನಟ ಸಂಚಾರಿ ವಿಜಯ್ ಅಭಿನಯಿಸುತ್ತಿರುವ 'ಪಾದರಸ' ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದ್ದು, ಶೀರ್ಘದಲ್ಲೇ ತೆರೆಗೆ ಬರಲು ಸಜ್ಜಾಗುತ್ತಿದೆ. ಆರ್ಟ್ ಎನ್ ಸೋಲ್ ಮೀಡಿಯಾ ಸರ್ವೀಸಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ 'ಪಾದರಸ' ಚಿತ್ರ ಮನಸೇ ಮನಸೇ ಕ್ಷಮಿಸು ಮನಸೇ, ಬಣ್ಣದ ವೇಷ ಬಯಲಾದ ಮೇಲೆ ಸ್ವಪ್ನದ ಪೀಠ ಚೂರಾಗೊ ವೇಳೆ ಎದೆಯಾಳದಲ್ಲಿ ವಿರಹಾಗ್ನಿ ಜ್ವಾಲೆ ಈ ಮೂರು ಹಾಡಿನೊಂದಿಗೆ ಚಿತ್ರೀಕರಣ ಪೂರ್ಣಗೊಂಡಿದೆ.
ಈ ಸಿನಿಮಾಕ್ಕೆ ಎಂ.ಬಿ ಅಳ್ಳಿಕಟ್ಟಿ ಅವರ ಛಾಯಾಚಿತ್ರ ಜಯಂತ್ ಕಾಯ್ಕಿಣಿ, ಗೌಸ್ ಪೀರ್ , ಸಂಜಯ್ ಕುಲಕರ್ಣಿ ಸಾಹಿತ್ಯ ಬರೆದಿದ್ದಾರೆ. ಸಂಕಲನ ಕೆ.ಎಂ ಪ್ರಕಾಶ್, ಸಹನಿರ್ದೇಶನ-ಕುಬೇರ್ ಕೆ.ಮಂಡ್ಯ , ಕಲೆ ಬಾಬು ಖಾನ್, ನೃತ್ಯ ಮನುಮಾಸ್ಟರ್ ,ನಾಗಿ , ಜಗನ್ , ನಿರ್ಮಾಣ, ನಿರ್ವಹಣೆ ಪ್ರಕಾಶ್ ಮಧುಗಿರಿ ನಿರ್ವಹಿಸಿದ್ದಾರೆ.
Comments