ಜೂಲಿ -2 ಸಿನಿಮಾದಲ್ಲಿ ಹಾಟ್ ಆಗಿ ಕಾಣಿಸಿಕೊಂಡ ನಟಿ ಲಕ್ಷ್ಮೀ ರೈ, ಇದೊಂದು ಶೃಂಗಾರ ಚಿತ್ರವಲ್ಲ ಎಂದ ನಟಿ

ಮುಂಬೈ: ಬಿಡುಗಡೆಗೂ ಮುನ್ನವೇ ಹಾಟ್ ಟಾಪಿಕ್ ಆಗಿರೋ ಬಾಲಿವುಡ್ 'ಜೂಲಿ 2' ಚಿತ್ರ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಜೂಲಿ ಚಿತ್ರದ ಮುಂದುವರೆದ ಭಾಗವೇ 'ಜೂಲಿ 2' ಚಿತ್ರ. ಈ ಚಿತ್ರದಲ್ಲಿ ನೇಹಾ ಧೂಪಿಯಾ ಬಿಂದಾಸ್ ಆಗಿ ನಟಿಸಿ ಪ್ರೇಕ್ಷರನ್ನು ರಂಜಿಸಿದ್ದರು.
ಮುಂಬೈ: ಬಿಡುಗಡೆಗೂ ಮುನ್ನವೇ ಹಾಟ್ ಟಾಪಿಕ್ ಆಗಿರೋ ಬಾಲಿವುಡ್ 'ಜೂಲಿ 2' ಚಿತ್ರ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಜೂಲಿ ಚಿತ್ರದ ಮುಂದುವರೆದ ಭಾಗವೇ 'ಜೂಲಿ 2' ಚಿತ್ರ. ಈ ಚಿತ್ರದಲ್ಲಿ ನೇಹಾ ಧೂಪಿಯಾ ಬಿಂದಾಸ್ ಆಗಿ ನಟಿಸಿ ಪ್ರೇಕ್ಷರನ್ನು ರಂಜಿಸಿದ್ದರು. ಇದು ಸಾಕಷ್ಟು ಸಂಚಲನಕ್ಕೆ ಕಾರಣವಾಗಿತ್ತು. ಈಗ ಮುಂದುವರಿದ ಭಾಗದಲ್ಲಿ ಬೆಳಗಾವಿ ಮೂಲದ ನಟಿ ಲಕ್ಷ್ಮೀ ರೈ ಹಾಟ್ ಆಗಿ ಬೋಲ್ಡ್ ಹಾಗೂ ಬಿಕಿನಿ ಪಾತ್ರದಲ್ಲಿ ಕಾಣಿಸಿಕೊಳ್ಳುವುದರ ಮೂಲಕ ಸಾಮಾಜಿಕ ಜಾಲತಾಣ ಸೇರಿದಂತೆ ಎಲ್ಲಾ ಕಡೆಗಳಲ್ಲಿ
ಸುದ್ದಿ ಮಾಡುತ್ತಿದ್ದಾರೆ.
ನಟಿ ಲಕ್ಷ್ಮೀ ರೈ ಅವರದ್ದು ಈ ಚಿತ್ರದಲ್ಲಿ ಪ್ರಮುಖ ಪಾತ್ರ, ಸಿನಿಮಾಗೆ ಸಂಬಂಧಿಸಿದ ಪೋಸ್ಟರ್, ಟೀಸರ್ ಹಾಗೂ ಟ್ರೈಲರ್ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಆದ್ದರಿಂದ 'ಜೂಲಿ 2' ಚಿತ್ರ ಮತ್ತಷ್ಟು ಕುತುಹಲ ಸೃಷ್ಠಿಸುತ್ತಿದೆ. ಇನ್ನು ಈ ಸಿನಿಮಾಗೆ ಕೇಂದ್ರ ಸೆನ್ಸಾರ್ ಮಂಡಳಿ ಮಾಜಿ ಅಧ್ಯಕ್ಷ ನಿಹ್ಲಾನಿ ಬಿಡುಗಡೆ ಮಾಡುತ್ತಿರುವ ಇನ್ನೊಂದು ಕುತುಹಲಕ್ಕೆ ಕಾರಣವಾಗಿದೆ. ತಾನು ಪದವಿಯಲ್ಲಿರುವಷ್ಟು ದಿನ ಕೇವಲ ಸಭ್ಯ ಚಿತ್ರಗಳಷ್ಟೇ ಬರಬೇಕೆಂದಿದ್ದ ನಿಹ್ಲಾನಿ, ಈಗಾಗ್ಲೇ ಸಾಕಷ್ಟು ಚಿತ್ರಗಳಿಗೆ ಭರ್ಜರಿ ಕತ್ತರಿ ಪ್ರಯೋಗ ಮಾಡಿದ್ದರು. ವಿಷಯ ಹೀಗಿದ್ದರೂ 'ಜೂಲಿ -2' ಚಿತ್ರ ಬಿಡುಗಡೆ ಮಾಡುತ್ತಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಬಗ್ಗೆ ಮಾತನಾಡಿರುವ ಲಕ್ಷ್ಮೀ ರೈ ಇದು ಶೃಂಗಾರ ಸಿನಿಮಾ ಎಂಬುದನ್ನು ಒಪ್ಪುತ್ತಿಲ್ಲ. 'ಜೂಲಿ 2' ಸಿನಿಮಾವನ್ನು ಶೃಂಗಾರ ಚಿತ್ರವಾಗಿ ವೀಕ್ಷಿಸಬೇಡಿ, ಇದರಲ್ಲಿ ಸಾಕಷ್ಟು ಕಟೆಂಟು ಇದೆ ಎಂದು ಹೇಳಿದ್ದರು.
Comments