ಫೇಸ್ ಬುಕ್ ಲೈವ್ ಮೂಲಕ 'ಭರ್ಜರಿ' ಸಿನಿಮಾ ಪುಕ್ಕಟೆ ಪ್ರಸಾರ
'ಭರ್ಜರಿ' ಚಿತ್ರವನ್ನು ಕೆಲ ಕಿಡಿಗೇಡಿಗಳು ಫೇಸ್ ಬುಕ್ ಲೈವ್ ಮೂಲಕ ಬಿಟ್ಟಿ ಪ್ರಸಾರ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಈಗ 'ಭರ್ಜರಿ' ಚಿತ್ರದ ದೃಶ್ಯಗಳು ಹರಿದಾಡುತ್ತಿದೆ. ಎರಡು ವರ್ಷಗಳಿಂದ ಕಷ್ಟಪಟ್ಟು ಸಿನಿಮಾ ಮಾಡಿದ್ದ 'ಭರ್ಜರಿ' ಚಿತ್ರತಂಡಕ್ಕೆ ಈ ಫೇಸ್ ಬುಕ್ ಲೈವ್ ದೊಡ್ಡ ಶಾಕ್ ನೀಡಿದೆ.
ಭರ್ಜರಿ' ಧ್ರುವ ಸರ್ಜಾ ಮತ್ತು ರಚಿತಾ ರಾಮ್ ನಟಿಸಿರುವ ಸಿನಿಮಾ. 'ಬಹದ್ದೂರ್' ಖ್ಯಾತಿಯ ಚೇತನ್ ಕುಮಾರ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಅಂದ್ಹಾಗೆ, ಚಿತ್ರಕ್ಕೆ ದೊಡ್ಡ ರೆಸ್ಪಾನ್ಸ್ ಸಿಕ್ಕಿದ್ದು, ದಾವಣಗೆರೆ, ಬಿಜಾಪುರ, ಹೊಸಪೇಟೆ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಚಿತ್ರದ ಪ್ರದರ್ಶನ ಮಧ್ಯರಾತ್ರಿಯಿಂದ ಶುರುವಾಗಿದೆ. ಭರ್ಜರಿ ಚಿತ್ರಕ್ಕೂ ಹಿಂದೆ ಸುದೀಪ್ ಅವರ 'ಹೆಬ್ಬುಲಿ', ದರ್ಶನ್ ಅವರ 'ಚಕ್ರವರ್ತಿ' ಚಿತ್ರಗಳಿಗೂ ಇದೇ ರೀತಿಯ ಸಮಸ್ಯೆ ಎದುರಾಗಿತ್ತುಹುಬ್ಬಳ್ಳಿ ಮೂಲದ ಸಂತೋಷ್ ಎಂಬ ಯುವಕ ಚಿತ್ರಮಂದಿರದಲ್ಲಿ ಕುಳಿತು ತನ್ನ ಫೇಸ್ ಬುಕ್ ಖಾತೆಯ ಮೂಲಕ 'ಫಸ್ಟ್ ಡೇ ಫಸ್ಟ್ ಶೋ' ಎಂದು 'ಭರ್ಜರಿ' ಸಿನಿಮಾವನ್ನು ಲೈವ್ ಮಾಡಿದ್ದಾನೆ. ಸಂತೋಷ್ ಎಂಬ ಯುವಕ ಲೈವ್ ಮಾಡಿದ ವಿಡಿಯೋವನ್ನು ಅನೇಕರು ಶೇರ್ ಮಾಡಿದ್ದಾರೆ. 856ಕ್ಕೂ ಹೆಚ್ಚು ಜನರು ಸಿನಿಮಾವನ್ನು ಬಿಟ್ಟಿಯಾಗಿ ಕಣ್ತುಂಬಿಕೊಂಡಿದ್ದಾರೆ. ಒಂದು ಸಿನಿಮಾ ಮಾಡುವುದಕ್ಕೆ ವರ್ಷಗಳ ಕಾಲ ಎಷ್ಟೋ ಜನ ಕಷ್ಟಪಟ್ಟಿರುತ್ತಾರೆ. ಅದನ್ನು ಅರ್ಥ ಮಾಡಿಕೊಳ್ಳಿ. ಇಡೀ ಚಿತ್ರತಂಡದ ಶ್ರಮಕ್ಕೆ ಬೆಲೆ ನೀಡಿ. ಫೇಸ್ ಬುಕ್ ಲೈವ್ ಮೂಲಕ ಅಥವಾ ವಿಡಿಯೋ ರೆಕಾರ್ಡ್ ಮಾಡಿ ಲೀಕ್ ಮಾಡುವ ಮೂಲಕ ನಿರ್ಮಾಪಕರಿಗೆ ನಷ್ಟ ಮಾಡಬೇಡಿ.
Comments