ರೆಬಲ್ ಸ್ಟಾರ್ ಅಂಬರೀಶ್ ಪುತ್ರ ಸ್ಯಾಂಡಲ್ ವುಡ್ ಗೆ ಎಂಟ್ರಿ
ರೆಬಲ್ ಸ್ಟಾರ್ ಅಂಬರೀಶ್, ನಟಿ ಸುಮಲತಾ ಅವರ ಪುತ್ರ ಅಭಿಷೇಕ್ ಗೌಡ ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ. ಚಿತ್ರರಂಗದ ಕುಟುಂಬಕ್ಕೆ ಸೇರಿದ್ದರೂ, ಅಭಿಷೇಕ್ ಚಿತ್ರರಂಗದಿಂದ ದೂರವೇ ಇದ್ದು, ಓದಿನ ಕಡೆ ಗಮನ ನೀಡಿದ್ದಾರೆ. ವಿದೇಶದಲ್ಲಿ ಓದಿರುವ ಅವರು, ಸಿನಿಮಾ ರಂಗಕ್ಕೆ ಎಂಟ್ರಿ ಕೊಡಲು ಉತ್ಸುಕರಾಗಿದ್ದಾರೆ. ಇದಕ್ಕಿಂತ ಮೊದಲು ಅಗತ್ಯ ತರಬೇತಿಯನ್ನು ಪಡೆದುಕೊಳ್ಳಲಿದ್ದಾರೆ.
ಸಿನಿಮಾ ಕುಟುಂಬದವರು ಸಿನಿಮಾರಂಗದಲ್ಲಿ ಕಾಣಿಸಿಕೊಳ್ಳುವುದು ಹೊಸದೇನಲ್ಲ. ಸ್ಯಾಂಡಲ್ ವುಡ್ ನಲ್ಲಿ ಮತ್ತೊಬ್ಬ ಸ್ಟಾರ್ ಪುತ್ರ ಬೆಳ್ಳಿ ತೆರೆಗೆ ಎಂಟ್ರಿ ಕೊಡಲಿದ್ದಾರೆ. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಸುಮಲತಾ ಅವರು, ಅಭಿಷೇಕ್ ಚಿತ್ರರಂಗ ಪ್ರವೇಶಿಸಲು ಉತ್ಸುಕನಾಗಿದ್ದಾನೆ ಎಂದು ಹೇಳಿದ್ದಾರೆ. ಅಂಬರೀಶ್ ಕೂಡ ಸಹಮತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದ್ದು, ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ಶೀಘ್ರವೇ ಅಭಿಷೇಕ್ ಬೆಳ್ಳಿತೆರೆಗೆ ಎಂಟ್ರಿ ಕೊಡಲಿದ್ದಾರೆ.
Comments