ಕರಾವಳಿಯಾದ್ಯಂತ ತೆರೆ ಕಾಣಲಿರುವ ನೇಮೊದ ಬೂಳ್ಯ ತುಳು ಚಿತ್ರ
ಪರತಿ ಮಂಗಣೆ ಪಾಡ್ದನ ಆಧರಿಸಿದ ನೇಮೊದ ಬೂಳ್ಯ ಚಿತ್ರವನ್ನು ಮುಂಬೈ ಉದ್ಯಮಿ ಕುದ್ರಾಡಿಗುತ್ತು ಚಂದ್ರಶೇಖರ ಮಾಡ ಅವರು ನಿರ್ಮಾಣ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಪ್ರೀತಂ ಶೆಟ್ಟಿ ಕಡಾರ್ ಅವರು ಮೈಂದ ಪಾತ್ರದಲ್ಲಿ ಹಾಗೂ ಕಿರುತೆರೆ ನಟಿ ರಜನಿ (ಪರತಿ ಮಂಗಣೆ) ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಾಟಕಕಾರ ಬಿ.ಕೆ.ಗಂಗಾಧರ ನಿರ್ದೇಶನದ ಸತ್ಯಾಧಾರಿತ ಕಥೆಯನ್ನು ಒಳಗೊಂಡ 'ನೇಮೊದ ಬೂಳ್ಯ' ತುಳು ಚಿತ್ರ ಇದೇ 22ರಂದು ಕರಾವಳಿಯಾದ್ಯಂತ ತೆರೆ ಕಾಣಲಿದೆ.
ಚಿತ್ರಕ್ಕೆ ಕಥೆ, ಸಂಭಾಷಣೆಯನ್ನು ನಿರ್ದೇಶಕ ಬಿ.ಕೆ.ಗಂಗಾಧರ ಕಿರೋಡಿಯನ್ ಬರೆದಿದ್ದಾರೆ. ವಿ.ಮನೋಹರ್ ಸಾಹಿತ್ಯ ಮತ್ತು ಸಂಗೀತದಲ್ಲಿ ಚಿತ್ರದ ಹಾಡುಗಳು ಉತ್ತಮವಾಗಿ ಮೂಡಿಬಂದಿದೆ.ಖಳನಾಯಕ ಅಣ್ಣಪ್ಪ ಬಲ್ಲಾಳನಾಗಿ, ಪ್ರದೀಪ್ ಚಂದ್ರ ಉಡುಪಿ ನಟಿಸಿದ್ದಾರೆ. ತಾರಾಗಣದಲ್ಲಿ ಕನ್ನಡ ಹಿರಿಯ ನಟರಾದ ರಮೇಶ್ ಭಟ್, ಮಂಡ್ಯ ರಮೇಶ್, ವಿ.ಮನೋಹರ್, ರಘರಾಮ ಶೆಟ್ಟಿ, ರಮೇಶ್ ಕಲ್ಲಡ್ಕ, ಮೋಹನ್ ಬೋಳಾರ್, ಜಯಶೀಲ, ಪವಿತ್ರಾ ಶೆಟ್ಟಿ, ವೀಣಾ ಶೆಟ್ಟಿ, ಜಲಜಾ ಬೆಂಗಳೂರು, ಇಂದಿರಾ, ಮಮತಾ, ಯೋಗಿತಾ ಹರಿಣಿ ಕಾಣಿಸಿಕೊಂಡಿದ್ದಾರೆ.
Comments