ಕಬ್ಬಡಿ ಮೈದಾನಕ್ಕಿಳಿಯಲಿದ್ದಾರೆ ಸ್ಯಾಂಡಲ್ ವುಡ್ ನಟಿಯರು

15 Sep 2017 11:00 AM | Entertainment
429 Report

ಸ್ಯಾಂಡಲ್ ವುಡ್ ನ ನಿಮ್ಮ ನೆಚ್ಚಿನ ನಟಿಯರನ್ನು ಇನ್ನು ಮುಂದೆ ನೀವು ಕಬ್ಬಡಿ ಮೈದಾನದಲ್ಲಿ ನೋಡಬಹುದಾಗಿದೆ. ನಟಿ ರಾಗಿಣಿ ದ್ವಿವೇದಿ, ಮನ್ವಿತಾ ಹರೀಶ್, ಯಜ್ಞ ಶೆಟ್ಟಿ, ಮೇಘನಾ ಗಾಂವ್ಕರ್, ಸೋನು ಗೌಡ, ಶುಭ ಪೂಂಜಾ, ಹರಿಪ್ರಿಯಾ, ಕಾರುಣ್ಯ ಕಬ್ಬಡಿ ಆಡಲು ಆಸಕ್ತಿ ತೋರಿಸಿದ್ದಾರೆ. ಅಕ್ಟೋಬರ್ ನಲ್ಲಿ ಈ ಲೀಗ್ ನಡೆಯಲಿದೆ ಎಂದು ಮೂಲಗಳು ಹೇಳಿವೆ.

ಸೆಲೆಬ್ರಿಟಿ ಲೀಗ್ ನಲ್ಲಿ ಸ್ಯಾಂಡಲ್ ವುಡ್ ನಟರು ಮಾತ್ರ ಆಟದ ಮೈದಾನಕ್ಕಿಳಿದು ಕ್ರಿಕೆಟ್ ಮೂಲಕ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ.ಈಗ ಸ್ಯಾಂಡಲ್ ವುಡ್ ನಟಿಯರ ಸರದಿ. ಈ ಕಬ್ಬಡಿ ಲೀಗ್ ನಲ್ಲಿ 8 ತಂಡಗಳು ಭಾಗಿಯಾಗಲಿವೆ. ವೃತ್ತಿಪರ ಕಬ್ಬಡಿ ತಂಡ ಕೂಡ ಲೀಗ್ ನಲ್ಲಿರಲಿದೆ. ಕಬ್ಬಡಿ ಮೈದಾನಕ್ಕೆ ಇಳಿದು ಕಬ್ಬಡಿ ಆಡಲು ತಯಾರಾಗುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

Courtesy: Dailyhunt

Comments