ನಾವು ದೇಹಸಿರಿ ಪ್ರದರ್ಶಿಸಿದರೆ 'ಎಕ್ಸ್ ಪೋಸ್' ಎಂದು ಬೊಬ್ಬೆ ಹೊಡೆಯುತ್ತಾರೆ- ನಟಿ ಜರಿನಾ ಖಾನ್
ಬಾಲಿವುಡ್: ಬಾಲಿವುಡ್ ನ ನಟಿ ಜರಿನಾ ಖಾನ್ ದೇಹಸಿರಿ ಪ್ರದರ್ಶನದ ಬಗ್ಗೆ ತಾರತಮ್ಯ ಕುರಿತು ಪ್ರಶ್ನೆ ಮಾಡಿದ್ದಾರೆ. ಬಾಲಿವುಡ್ ನಲ್ಲಿ ಕೆಲ ಖ್ಯಾತ ನಟಿಯರು ದೇಹಸಿರಿ ಪ್ರದರ್ಶನ ಮಾಡಿದರೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ.
ಮುಂಬೈ: ಬಾಲಿವುಡ್ ನ ನಟಿ ಜರಿನಾ ಖಾನ್ ದೇಹಸಿರಿ ಪ್ರದರ್ಶನದ ಬಗ್ಗೆ ತಾರತಮ್ಯ ಕುರಿತು ಪ್ರಶ್ನೆ ಮಾಡಿದ್ದಾರೆ. ಬಾಲಿವುಡ್ ನಲ್ಲಿ ಕೆಲ ಖ್ಯಾತ ನಟಿಯರು ದೇಹಸಿರಿ ಪ್ರದರ್ಶನ ಮಾಡಿದರೆ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಆದರೆ ಯಾವೊಬ್ಬ ಸಣ್ಣ ನಟಿಯರು ತಮ್ಮ ದೇಹ ಸಿರಿ ಪ್ರದರ್ಶನ ಮಾಡಿದರೆ ಅದಕ್ಕೆ 'ಎಕ್ಸ್ ಪೋಸ್' ಎಂಬ ಬಣ್ಣ ಬಳಿಯುತ್ತಾರೆ ಎಂದು ಖಾಸಗಿ ಪತ್ರಿಕೆಗೆ ನೀಡಿದ ಸಂದರ್ಶನದ ವೇಳೆ ತಿಳಿಸಿದ್ದಾರೆ. ಈ ತಾರತಮ್ಯ ಏಕೆ ಎಂದು ಜರಿನಾ ಖಾನ್ ಪ್ರಶ್ನಿಸಿದ್ದಾರೆ.
ನಮ್ಮ ಬಗ್ಗೆ ಮಾತನಾಡಬೇಕೆಂದರೆ ನಮ್ಮ ಕಲೆ, ಅಭಿನಯದ ಬಗ್ಗೆ ಮಾತನಾಡಬೇಕು. ಅದು ಬಿಟ್ಟು ದೇಹದ ತೂಕದ ಬಗ್ಗೆ ಅಲ್ಲ, ತೂಕಕ್ಕೂ ನಟನೆಗೂ ಸಂಬಂಧವೇ ಇಲ್ಲ ಎಂಬುದು ನನ್ನ ನಂಬಿಕೆ. ಬಾಲಿವುಡ್ ನಲ್ಲಿ ನಾಯಕಿಯೊಬ್ಬಳು ಸಿನಿಮಾಕ್ಕೆ ಆಯ್ಕೆ ಆಗುವಾಗ ನೀವು ಇಷ್ಟು ತೂಕದ ಮೇಲೆ ಅಳೆಯಬಾರದು. ಅದು ಕೆಟ್ಟ ಚಾಳಿ, ಬಹಳಷ್ಟು ವಿಚಾರಗಳಲ್ಲಿ ನಾವು ಹಾಲಿವುಡ್ ಅನುಕರಿಸಲು ಪ್ರಯತ್ನಿಸುತ್ತೇವೆ. ಅಲ್ಲಿ ಕಲಾವಿದರೂ ದೇಹ ತೂಕಕ್ಕಿಂತ ಪ್ರತಿಭೆ, ಅಭಿನಯಕ್ಕೆ ಹೆಚ್ಚು ಬೆಲೆ, ಇದೇಕೆ ನಮಗೆ ಮಾದರಿ ಆಗಬಾರದು?
'ಜೀರೋ ಫಿಗರ್' ನಲ್ಲಿ ನಿಮಗೆ ನಂಬಿಕೆ ಇದೆಯೇ? ಎಂಬ ಪ್ರಶ್ನೆಗೆ ಉತ್ತರಸಿದ ಅವರು, ನನಗೆ 'ಜೀರೋ ಫಿಗರ್' ಆಗಬೇಕೆಂದರೂ
ನನಗೆ ಅದು ಸಾಧ್ಯವಿಲ್ಲ, ತೆಳ್ಳಗಾಗುವುದು ನನ್ನ ವೈಯಕ್ತಿಕ ಆಯ್ಕೆ, ನನ್ನ ಕುಟುಂಬದಲ್ಲಿ ಅನೇಕರು ದಪ್ಪಗಿದ್ದಾರೆ. ತೂಕ ಹೆಚ್ಚಾದರೆ ಅನೇಕ ಕಾಯಿಲೆಗಳು ಕಾಡುತ್ತವೆ. ಇದನ್ನು ಮನಗೊಂಡು ನಾನು ತೆಳ್ಳಗಾಗಲು ನಿರ್ಧರಿಸಿದೆ. ನಮ್ಮ ಶರೀರವೇ ದೇಗುಲ ನಿತ್ಯದ ಜಂಜಡದಲ್ಲಿ ನಮ್ಮ ಶರೀರದ ಕಡೆ ಗಮನವನ್ನೇ ನೀಡುವುದಿಲ್ಲ. ಹಾಗಾಗಿ ದೇಹದ ಫಿಟ್ ನೆಸ್ ಗೆ ಆದ್ಯತೆ ನೀಡಿ ತೆಳ್ಳಗಾಗಿದೆ. ತೂಕ ಕಡಿಮೆ ಆಗುವುದರಿಂದ ಆತ್ಮವಿಶ್ವಾಸ ಮೂಡುತ್ತದೆ. ಜತೆಗೆ ಇಷ್ಟಪಟ್ಟು ಉಡುಪುಗಳನ್ನು ತೊಡಬಹುದು ಎಂದು ತಿಳಿಸಿದರು.
Comments