ಸದ್ದಿಲ್ಲದೆ ಹಿಂದಿ ವಿಡಿಯೋ ಆಲ್ಬಂನಲ್ಲಿ ನಟಿಸಿರುವ ಮಯೂರಿ



ಮಯೂರಿ ನಟಿಸಿರುವ ಆಲ್ಬಂಗೆ "ಗರ್ಲ್' ಎಂದು ನಾಮಕರಣ ಮಾಡಲಾಗಿದೆ. ಈ ಆಲ್ಬಂನಲ್ಲಿ ಮಹಿಳೆಯರ ಬಗ್ಗೆ ಕಾಳಜಿ ತೋರುವ ಮತ್ತು ಅವರಿಗೂ ಗಂಡಸರಂತೆ ಸ್ವಾತಂತ್ರ್ಯ ಬೇಕು ಎಂಬ ಸಂದೇಶವಿದೆಯಂತೆ. ಮುಂಬೈ ಮೂಲದ ವಿಶಾಲ್ ಹಾಗೂ ಅಭಿಷೇಕ್ ವಿಡೀಯೋ ಆಲ್ಬಂನ ಎರಡು ಹಾಡುಗಳಿಗೆ ಸಾಹಿತ್ಯ ಬರೆದು, ನಿರ್ದೇಶನ ಮತ್ತು ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.
ವಿಶೇಷವೆಂದರೆ, ಇದು ಹಿಂದಿ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಮೂಡಿ ಬಂದಿರುವ ವಿಡೀಯೋ ಆಲ್ಬಂ. ಶೀರ್ಷಿಕೆಯೇ ಸೂಚಿಸುವಂತೆ, ಈ ವಿಡೀಯೋ ಆಲ್ಬಂನಲ್ಲಿ ಮಹಿಳೆಯರ ಬಗ್ಗೆ ಕಾಳಜಿ ತೋರುವ ಮತ್ತು ಅವರಿಗೂ ಗಂಡಸರಂತೆ ಸ್ವಾತಂತ್ರ್ಯ ಬೇಕು ಎಂಬ ಸಂದೇಶವಿದೆಯಂತೆ. ಹೆಣ್ಣು ಮಕ್ಕಳಿಗೆ ತಾವು ಇಷ್ಟಪಡುವ ಬಟ್ಟೆ ಹಾಕಿಕೊಳ್ಳುವುದರಲ್ಲಿ ಕಟ್ಟುಪಾಡು ಇದೆ. ಎಲ್ಲವನ್ನೂ ಸಹಿಸಿಕೊಳ್ಳುವ ಹೆಣ್ಣಿಗೆ, ಸರಿಯಾದ ಸ್ವಾತಂತ್ರ್ಯವೇ ಇರೋದಿಲ್ಲ. ಅವಳನ್ನು ನೋಡುವ ದೃಷ್ಟಿಯೂ ಬೇರೆ ರೀತಿ ಇರುತ್ತೆ. ಇದನ್ನೆಲ್ಲಾ ಮನಗಂಡು, ಮಹಿಳೆಗೂ ಸ್ವಾತಂತ್ರ್ಯ ಕೊಡಿ, ಅವಳ ಇಷ್ಟಕ್ಕೆ ಅಡ್ಡಿಯಾಗದಂತೆ ನೋಡಿಕೊಳ್ಳಿ ಎಂಬ ಹಿನ್ನೆಲೆಯುಳ್ಳ ಹಾಡು ಅದು ಎಂಬುದು ಮಯೂರಿ ಮಾತು . ಅಂದಹಾಗೆ, ಈ ಶುಕ್ರವಾರ ಯು ಟ್ಯೂಬ್ನಲ್ಲಿ ಟ್ರೇಲರ್ ರಿಲೀಸ್ ಆಗಲಿದ್ದು, ಮುಂದಿನ ಶುಕ್ರವಾರ ಹಾಡು ಬಿಡುಗಡೆಯಾಗಲಿದೆ. ಹಿಂದಿಯ ಸರಿಗಮಪ ವಿಜೇತರು ಈ ಹಾಡಿಗೆ ದನಿಯಾಗಿದ್ದಾರೆ' ಎನ್ನುತ್ತಾರೆ ಮಯೂರಿ.
Comments