ಆರೇಂಜ್ ಚಿತ್ರದಲ್ಲಿ ಗಣೇಶ್ ಜೊತೆ ಬ್ಯುಸಿಯಾಗಲಿರುವ ಪ್ರಿಯಾ ಆನಂದ್

ರಾಜಕುಮಾರ ಚಿತ್ರದ ಮೂಲಕ ಪ್ರೇಕ್ಷಕರ ಮನ ಗೆದ್ದ ಪ್ರಿಯಾಆನಂದ್, ಈಗ ಪ್ರಶಾಂತ್ ರಾಜ್ ನಿರ್ದೇಶನದ ಆರೇಂಜ್ ಸಿನಿಮಾದಲ್ಲಿ ಗಣೇಶ್ ಜೋಡಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಗಣೇಶ್ ಹುಟ್ಟುಹಬ್ಬದಂದು ಆರೇಂಜ್ ಟೈಟಲ್ ಬಿಡುಗಡೆಗೊಂಡು, ಅಕ್ಟೋಬರ್ ನಲ್ಲಿ ಸಿನಿಮಾ ಶೂಟಿಂಗ್ ಆರಂಭವಾಗಲಿದೆ. ಹೊಸ ಚಿತ್ರ ನೋಡಲು ಸ್ಯಾಂಡಲ್ ವುಡ್ ಕಾತುರದಿಂದ ಕಾಯುತ್ತಿದೆ.
ಸದ್ಯ ಪ್ರಿಯಾ ಆನಂದ್ ಕುಟುಂಬ ಸದಸ್ಯರೊಂದಿಗೆ ವಿದೇಶಿ ಪ್ರವಾಸದಲ್ಲಿದ್ದು, ಆಕೆ ಭಾರತಕ್ಕೆ ಮರಳಿದ ನಂತರ ಔಪಚಾರಿಕವಾಗಿ ಮಾತುಕತೆ ಪೂರ್ಣಗೊಳ್ಳಲಿದೆ. ಸದ್ಯ ಚಮಕ್ ಚಿತ್ರದಲ್ಲಿ ಗಣೇಶ್ ಬ್ಯುಸಿಯಾಗಿದ್ದಾರೆ.ಮೊದಲ ಸುತ್ತಿನ ಮಾತುಕತೆ ಮುಗಿದಿದ್ದು, ಆಕೆ ಸಹಿ ಮಾಡಿದ ನಂತರ ಅಧಿಕೃತ ಪ್ರಕಟಣೆ ಮಾಡುವುದಷ್ಟೇ ಬಾಕಿಯಿದೆ ಎಂದು ಮೂಲಗಳು ತಿಳಿಸಿವೆ.
Comments