ಬ್ಯುಸಿ ದುನಿಯಾ ಕಥೆ ಹೇಳಲು ಹೊರಟ ನಿರ್ದೇಶಕ ಮಧುಸೂಧನ್
ಹೊಸ ಆಲೋಚನೆಯನ್ನಿಟ್ಟುಕೊಂಡು ವಿಭಿನ್ನ ಕಥೆಯ ಮೂಲಕ ಪ್ರೇಕ್ಷಕರನ್ನು ರಂಜಿಸಲು ಸಿದ್ದರಾಗಿರುವ ಮಧುಸೂದನ್ ನೀವು ಕರೆ ಮಾಡುತ್ತಿರುವ ಚಂದಾದಾರರು ಬ್ಯುಸಿಯಾಗಿದ್ದಾರೆ ಎಂದು ಸ್ಪೀಡು ದುನಿಯಾ ಬಗ್ಗೆ ಹೇಳಲು ಹೊರಟ್ಟಿದ್ದಾರೆ. ಒಂದೊಳ್ಳೆ ಚಿತ್ರ ಮಾಡಬೇಕೆಂಬ ಕನಸು ಹೊತ್ತಿರೋ ಮಧುಸೂದನ್ ಈ ಚಿತ್ರವನ್ನು ನಿರ್ದೇಶಿಸಲಿದ್ದಾರೆ.ಇಲ್ಲಿ ಎಲ್ಲರೂ ಒಂದೊಂದು ಮಾಯೆಯ ಬೆಂಬಿದ್ದು ಬ್ಯುಸಿಯಾಗಿರುವವರೇ. ಇಂಥಾ ಒತ್ತಡದ ನಡುವೆ ಬಹುತೇಕರು ತಮಗೆ ಅರಿವಿಲ್ಲದಂತೆ ಹತ್ತಿರದ ಸಂಬಂಧಗಳ ವ್ಯಾಪ್ತಿ ಪ್ರದೇಶದಿಂದ ಹೊರ ನಿಂತಿರುತ್ತಾರೆ.
ಹೀಗೆ ಸಂಬಂಧಗಳೇ ಸಡಿಲವಾದರೆ ಅದನ್ನು ಮತ್ತೆ ಸರಿಯಾಗಿಸೋದು ಎಷ್ಟು ಕಷ್ಟ ಎಂಬುದನ್ನು ಈ ಚಿತ್ರದಲ್ಲಿ ನಿರ್ದೇಶಕರು ಮಜವಾಗಿ ಹೇಳಲು ಸಜ್ಜಾಗಿದ್ದಾರೆ. ದೇವರಾಜ್, ಶೃತಿ, ತಾರಾ, ತಿಥಿ ಖ್ಯಾತಿಯ ಪೂಜಾ, ಶೀತಲ್ ಶೆಟ್ಟಿ ಮುಂತಾದ ಕಲಾವಿದರ ತಂಡವಿದೆ. ನಿರ್ದೇಶಕರು ಕಥೆ ಹೇಳಿದಾಗ ಚಿತ್ರದ ನಾಯಕ ನಾಯಕಿಯರು ಒಂದೇ ಸಲಕ್ಕೆ ಇಂಪ್ರೆಸ್ ಆಗಿದ್ದರಂತೆ. ಕಥೆಯನ್ನು ಬಹುವಾಗಿ ಮೆಚ್ಚಿಕೊಂಡು ಸಂಪೂರ್ಣ ಸಹಕಾರ ನೀಡೋದಾಗಿ ಭರವಸೆ ಕೊಟ್ಟು ಒಪ್ಪಿಕೊಂಡರಂತೆ. ಈ ಚಿತ್ರದಲ್ಲಿ ದೇವರಾಜ್ ಅವರದ್ದು ವಿಭಿನ್ನವಾದ ಪಾತ್ರವಾಗಿದ್ದು,ಅವರು ಈ ಹಿಂದೆಂದೂ ನೋಡಿರದಿದ್ದ ಹೊಸ ಪಾತ್ರದ್ಲಲಿ ಅಭಿನಯಿಸಲಿದ್ದಾರೆ. ಪಾತ್ರಕ್ಕೆ ತಕ್ಕಂತೆ ದೇವರಾಜ್ ಅವರೂ ಕೂಡಾ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಸುಬ್ಬಯ್ಯ ಕುಟ್ಟಪ್ಪ ಛಾಯಾಗ್ರಹಣ ಮಾಡಲಿದ್ದು ,ಶ್ರೀ ಕ್ರೇಜಿ ಮೈಂಡ್ಸ್ ಸಂಕಲನ ಇರೋ ಈ ಚಿತ್ರಕ್ಕೆ ಅಕ್ಟೋಬರ್ ಹತ್ತರಿಂದ ಬೆಂಗಳೂರು, ಗೋವಾ, ಕೇರಳ ಮುಂತಾದ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲು ಚಿತ್ರ ತಂಡ ತಯಾರಿ ಮಾಡಿಕೊಳ್ಳುತ್ತಿದೆ. ಈ ಚಿತ್ರಕ್ಕೆ ಮನೋಜ್ ಜಾರ್ಜ್ ರಾಗ ಸಂಯೋಜನೆ ಮಾಡಲಿದ್ದು, ಚಿತ್ರದಲ್ಲಿ ಐದು ಹಾಡುಗಳಿವೆ.
Comments