ರಾಕಿಂಗ್ ಸ್ಟಾರ್ ಯಶ್ ರನ್ನು ಸಂಕಷ್ಟಕ್ಕೆ ಸಿಲುಕಿಸಿದ ಅಭಿಮಾನಿ
ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಮದುವೆ ಆಗಿದ್ರೂ ಕೂಡ ಯಶ್ ಮೇಲೆ ಹುಡುಗಿಯರ ಪ್ರೀತಿ ಕಡಿಮೆಯಾಗಿಲ್ಲ. ಇತ್ತೀಚೆಗಷ್ಟೇ ರಾಧಿಕಾ ಪಂಡಿತ್ ಗೆ ಟ್ವಿಟ್ಟರ್ ನಲ್ಲಿ ಅಭಿಮಾನಿಯೊಬ್ಬರು, ಯಶ್ ಅವರನ್ನು ನಾನು ಮದುವೆ ಆಗ್ಲಾ ಎಂದು ಕೇಳಿದ್ದರು.ಇದಕ್ಕೆ ನಾಜೂಕಾಗಿ ರಾಧಿಕಾ ಉತ್ತರಿಸಿದ್ರು ಈಗ ಅಭಿಮಾನಿಯೊಬ್ಬರು ರಾಧಿಕಾ ಪಂಡಿತ್ ಎದುರಿಗೆ ಯಶ್ ಗೆ ಗೂಗ್ಲಿ ಹಾಕಿರುವ ಘಟನೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ.
ಯಶಸ್ ವಿನಾಯಕ ಕಾರ್ಯಕ್ರಮದಲ್ಲಿ ಅಭಿಮಾನಿಯೊಬ್ಬರು ಯಶ್ ಅವರಿಗೆ ಪ್ರಶ್ನೆಯೊಂದನ್ನ ಕೇಳಿ ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಈ ಪ್ರಶ್ನೆ ಕೇಳಿ ರಾಧಿಕಾ ಪಂಡಿತ್ ಕೂಡ ಶಾಕ್ ಆಗಿದ್ದಾರೆ. ಹಾಗಿದ್ರೆ, ಆ ಪ್ರಶ್ನೆ ಏನು? ಯಶ್ ಕೊಟ್ಟ ಉತ್ತರವೇನು? ಯಶ್ ಗೆ ಅಭಿಮಾನಿ ಎಸೆದ ಗೂಗ್ಲಿ , ಅಭಿಮಾನಿ ಕೇಳಿದ ಪ್ರಶ್ನೆ ಗೆ ಯಶ್ ಅವರು ಏನು ಉತ್ತರ ಕೊಡಲಿದ್ದಾರೆ ಎಂಬ ಕುತೂಹಲ ಸ್ವತಃ ರಾಧಿಕಾ ಅವರಿಗೂ ಕಾಡಿತು.
ಸಾವಿರಾರು ಅಭಿಮಾನಿಗಳು ಹಾಗೂ ರಾಧಿಕಾ ಪಂಡಿತ್ ಎದುರಿಗೆ ''ನಿಮಗೆ ರಾಧಿಕಾ ಪಂಡಿತ್ ಇಷ್ಟನಾ ಅಥವಾ ಈ ಅಭಿಮಾನಿಗಳು ಇಷ್ಟನಾ ಎಂದು ಕೇಳುವ ಮೂಲಕ ಯಶ್ ಅವರನ್ನ ಅಭಿಮಾನಿಯೊಬ್ಬರು ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಯಶ್ ಅವರು ಏನು ಉತ್ತರ ಕೊಡಲಿದ್ದಾರೆ ಎಂಬ ಕುತೂಹಲ ಸ್ವತಃ ರಾಧಿಕಾ ಅವರಿಗೂ ಕಾಡಿತು.ಅಭಿಮಾನಿ ಎಸೆದ ಗೂಗ್ಲಿಯನ್ನ ಯಶ್ ಹೇಗೆ ಎದುರಿಸಿದ್ದಾರೆ ಎನ್ನುವುದನ್ನು ಇದೇ ಭಾನುವಾರ ಸಂಜೆ 6 ಗಂಟೆಗೆ ಪ್ರಸಾರವಾಗುವ 'ಯಶಸ್ ವಿನಾಯಕ' ವಿಶೇಷ ಕಾರ್ಯಕ್ರಮದಲ್ಲಿ ನೋಡಬೇಕಿದೆ.
Comments