ಅಭಿಮಾನಿಗಳಿಂದ ಮೆಚ್ಚುಗೆಗೆ ಪಾತ್ರ ವಾದ ರಾಜಹಂಸ ಸಿನಿಮಾ




ಹೊಸಬರ ಚಿತ್ರವಾದ ರಾಜಹಂಸ ಚಿತ್ರವನ್ನು ಅಭಿಮಾನಿಗಳು ಮೆಚ್ಚಿದ್ದಕ್ಕೆ ಚಿತ್ರತಂಡ ಸಂತಸ ವ್ಯಕ್ತಪಡಿಸಿದೆ. ಪುಟ್ಟಗೌರಿ ಖ್ಯಾತಿಯ ರಂಜಿನಿ ರಾಘವನ್ ತಮ್ಮ ಅಭಿಮಾನಿಗಳಿಗೆ ತಮ್ಮಪಾತ್ರದ ಮೂಲಕ ರಂಜಿಸುವಲ್ಲಿ ಸಫಲರಾಗಿದ್ದಾರೆ. ರಾಜಹಂಸ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಂಡು ಚಿತ್ರ ಮಂದಿರಗಳಲ್ಲಿ ಮುನ್ನಗ್ಗುತ್ತಿದೆ.
ಚಿತ್ರ ಬಿಡುಗಡೆಗೊಂಡ ಮೂರೇ ದಿನಗಳಲ್ಲಿ ಸಿನಿಮಾ 1 ಕೋಟಿ ರೂ. ಹಣವನ್ನು ಗಳಿಸಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ. ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ಪ್ರೇಕ್ಷಕರನ್ನು ಚಿತ್ರಮಂದಿರಗಳತ್ತ ಸೆಳೆಯುವಲ್ಲಿ ಯಶಸ್ವಿಯತ್ತ ಸಾಗುತ್ತಿದೆ .ರಾಜ್ಯದಲ್ಲಿ ನೂರಕ್ಕೂ ಹೆಚ್ಚು ಥಿಯೇಟರ್ ನಲ್ಲಿ ತೆರೆ ಕಂಡ ರಾಜಹಂಸ ಚಲನಚಿತ್ರ ಬಾಡಿಗೆ ಸೇರಿ ಒಟ್ಟು 2.75 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿತ್ತು.
Comments