ಉರಿಯುವ ಬೆಂಕಿಗೆ ತುಪ್ಪ ಸುರಿದ ನಟಿ ಕಂಗನಾ ರಣೌತ್, ಅದಕ್ಕೆಲ್ಲಾ ಕೇರ್ ಮಾಡದ ನಟಿ ?

ಮುಂಬೈ: ಬಾಲಿವುಡ್ ನಲ್ಲಿ ಬೋಲ್ಡ್ ಹೇಳಿಕೆ ಗಳಿಂದಲೇ ಸುದ್ದಿಯಾಗುವ ನಟಿ ಕಂಗನಾ ರಣೌತ್, ಇತ್ತೀಚ್ಚಿಗೆ 'ಆಪ್ ಕಿ ಅದಾಲತ್' ಕಾರ್ಯಕ್ರಮದಲ್ಲಿ ಕಂಗನಾ ತನ್ನ ಲವ್ ಅಫೇರ್ ಬಗ್ಗೆ ಹೇಳಿರುವ ಬೋಲ್ಡ್ ಟಾಕ್ ಎಲ್ಲರನ್ನು ಮಂತ್ರ ಮುಗ್ಧರನ್ನಾಗಿಸಿತ್ತು.
'ತನ್ನ ಮೇಲೆ ಆದಿತ್ಯ ಪಾಂಚೋಲಿ ಮಾಡಿದ ಲೈಂಗಿಕ ದೌರ್ಜನ್ಯ , ಹೃತಿಕ್ ಜತೆಗಿನ ಲವ್ ಅಫೇರ್' ನ ಕಹಿ ಅನುಭವಗಳನ್ನು ಓಪನ್ ಆಗಿ ಹೇಳಿ ಬಾಲಿವುಡ್ ಮಂದಿಗೆ ಕೆಂಗೆಣ್ಣಿಗೆ ನಟಿ ಕಂಗನಾ ಗುರಿಯಾಗಿದ್ದರು. ಆದರೆ ಅದಕ್ಕೆಲ್ಲಾ ಕೇರ್ ಮಾಡದ ನಟಿ ಕಂಗನಾ, ಈಗ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ. ಅಷ್ಟಕ್ಕೂ ಅವರು ತುಪ್ಪ ಸುರಿದಿದ್ದಾದರೂ ಯಾತಕ್ಕೆ? ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ.
ಯೂ ಟ್ಯೂಬ್ ಜನಪ್ರಿಯ ಚಾನೆಲ್ ವೊಂದರಲ್ಲಿ AIB ವಿಡಿಯೋ ಶೇರ್ ಮಾಡಿರುವ ಕಂಗನಾ, ಭಾರತೀಯ ಸಿನಿಮಾ ರಂಗದಲ್ಲಿನ ಸ್ವಜನ ಪಕ್ಷಪಾತ ಲಿಂಗ ತಾರತಮ್ಯ ಇದೆ ಎಂಬರ್ಥದ ಹಾಡನ್ನು ಪೋಸ್ಟ್ ಮಾಡುವ ಮೂಲಕ ಮತ್ತಷ್ಟು ಗಮನ ಸೆಳೆದಿದ್ದಾರೆ.
ಮತ್ತೊಂದು ಚಾನಲ್ ವೊಂದರ ಸಂದರ್ಶನದ ವೇಳೆ ನಿನ್ನೆ ನಡೆದ ಸಂದರ್ಶನದಲ್ಲಿ ಕಂಗನಾ ಹೇಳಿಕೆ ನೀಡಿದ್ದಾರೆ. ನನ್ನ ವೃತ್ತಿ ಜೀವನ ಈಗ ಅಂತ್ಯಗೊಂಡರೂ ಚಿಂತೆಯಿಲ್ಲ, ಇದರಿಂದ ನಾನು ಕಳೆದುಕೊಳ್ಳುವುದು ಏನು ಇಲ್ಲ, ಬಾಲಿವುಡ್ ನಲ್ಲಿ ಒಂದು ದಶಕಕ್ಕೂ ಹೆಚ್ಚು ಪ್ರಯಾಣ ಮುಗಿಸಿರುವ ನಾನು ಮೂರು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದೇನೆ. ಅನೇಕ ವಿಜಯವನ್ನು ಸಾಧಿಸಿದ್ದೇನೆ. ಈಗ ನನ್ನ ವೃತ್ತಿ ಜೀವನ ಅಂತ್ಯಗೊಂಡರೂ ಪರವಾಗಿಲ್ಲ, ನನ್ನ ಮುಂದಿನ ಉಳಿದ ಭಾಗಕ್ಕೆ ನಾನು ಉತ್ತಮ ಯೋಜನೆಗಳನ್ನು ಹೊಂದಿದ್ದೇನೆ ಎಂದು ಹೇಳಿದ್ದಾರೆ.
ಆದ್ದರಿಂದ ಸಿನಿಮಾ ರಂಗದಲ್ಲಿ ನಾನು ಕಳೆದುಕೊಳ್ಳುವುದು ಏನು ಇಲ್ಲ, ನನ್ನ ಚೊಚ್ಚಲ ಹಾಗೂ ಇನ್ನಿತರ ಸಿನಿಮಾಗಳಲ್ಲಿ ನಟನೆ ಮಾಡುವ ಸಂದರ್ಭದಲ್ಲಿ ನನಗೆ ಭಯ ಇತ್ತು. ಆದ್ರೆ ಇವತ್ತು ಭಯ ನನ್ನ ವಶದಲ್ಲಿದೆ. ನಾನು ಕಷ್ಟ ಪಟ್ಟಿದ್ದೇನೆ, 15ನೇ ವಯಸ್ಸಿಗೆ ಮನೆ ಬಿಟ್ಟು ಬಂದಿದ್ದೆ ಈಗ ನನಗೆ 30 ವರ್ಷ, ನಾನು ಯಾರೆಂಬುದು ನನಗೆ ತಿಳಿದಿದೆ. ಆಂತರಿಕ ಸ್ವಭಾವದ ಬಗ್ಗೆ ಆವಿಷ್ಕಾರ ಮಾಡಿರುವ ನನಗೆ ತೃಪ್ತಿಯಾಗಿದೆ. ಸಾಧನೆಗೆ ಒಂದು ಅರ್ಥವಿದೆ. ನಾನು ಮೂರು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದಿದ್ದೇನೆ, ಬಾಕ್ಸ್ ಆಫೀಸ್ ದಾಖಲೆಗಳನ್ನು ಮುರಿದಿದ್ದೇನೆ, ಮಹಿಳೆ ಎಂಬ ಕಾರಣಕ್ಕೆ ಈ ಕುರಿತು ಪ್ರಶ್ನೆಗಳು, ಸಂದಿಗ್ಧ ಸಂದರ್ಭಗಳು ಎದುರಾದರೆ ಖಂಡಿತ ನಾನು ಈ ಬಗ್ಗೆ ಮಾತನಾಡುತ್ತೇನೆ ಎಂದು ನಟಿ ಕಂಗನಾ ರಣೌತ್ ತಿಳಿಸಿದ್ದಾರೆ.
Comments