ಯಾವುದೇ ಕನ್ನಡ ಸಿನಿಮಾಗಳು ತೆರೆ ಕಂಡಿಲ್ಲದ ಚಿತ್ರ ಮಂದಿರಗಳಲ್ಲಿ ರಿಲೀಸ್ ಆಗಲಿರುವ ಭರ್ಜರಿ ಸಿನಿಮಾ




ಸ್ಯಾಂಡಲ್ ವುಡ್ ವಾರಾಂತ್ಯದಲ್ಲಿ ಮತ್ತೊಂದು ಸಾಧನೆ ಮಾಡುವತ್ತ ಹೆಜ್ಜೆ ಇಟ್ಟಿದೆ, ಕಳೆದ 20 ವರ್ಷಗಳಿಂದ ಕನ್ನಡ ಸಿನಿಮಾ ಪ್ರದರ್ಶನವನ್ನೇ ಕಾಣದ ರೆಕ್ಸ್ ಮತ್ತು ಊರ್ವಶಿ ಚಿತ್ರಮಂದಿರಗಳಲ್ಲಿ ಭರ್ಜರಿ ಸಿನಿಮಾ ರಿಲೀಸ್ ಆಗಲಿದೆ.
ಈ ಎರಡು ಥಿಯೇಟರ್ ಗಳಲ್ಲಿ ಕೇವಲ ಹಿಂದಿ ಮತ್ತು ಇಂಗ್ಲಿಷ್ ಸಿನಿಮಾಗಳು ಮಾತ್ರ ಬಿಡುಗಡೆಗೊಳ್ಳುತಿದ್ದವು , ಆದರೆ ಸಿನಿಮಾದ ಟ್ರೈಲರ್ ಮತ್ತು ಹಾಡುಗಳನ್ನು ಕೇಳಿ ಪ್ರೇರಿತರಾಗಿರುವ ಥಿಯೇಟರ್ ಮಾಲೀಕರು ಭರ್ಜರಿ ಸಿನಿಮಾ ರಿಲೀಸ್ ಗೆ ಸಮ್ಮತಿಸಿದ್ದಾರೆ ಎಂದು ನಿರ್ದೇಶಕ ಚೇತನಕುಮಾರ್ ಹೇಳಿದ್ದಾರೆ.ಆರ್.ಎಸ್.ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗುತ್ತಿರುವ ಭರ್ಜರಿ ಸಿನಿಮಾದಲ್ಲಿ ರಚಿತಾರಾಮ್, ಹರಿಪ್ರಿಯಾ ಧ್ರುವ ಸರ್ಜಾಗೆ ನಾಯಕಿಯರಾಗಿದ್ದರೆ.ಭರ್ಜರಿ ಸಿನಿಮಾ 300 ಚಿತ್ರ ಮಂದಿರಗಳಲ್ಲಿ ತೆರೆ ಕಾಣಲಿದೆ.
Comments