ದರ್ಶನ್ ರಾಜಕೀಯ ಎಂಟ್ರಿ ಕೊನೆಗೂ ತುಟಿಬಿಚ್ಚಿದ ಚಾಲೆಂಜಿಂಗ್ ಸ್ಟಾರ್

ಬೆಂಗಳೂರು(ಸೆ.12): ಚಾಲೆಂಜಿಂಗ್ ಸ್ಟಾರ್ ದರ್ಶನ್ ರಾಜಕೀಯಕ್ಕೆ ಎಂಟ್ರಿ ಕೊಡ್ತಾರಾ ಎಂಬ ವದಂತಿಗಳ ಕುರಿತಂತೆ ಕೊನೆಗೂ ದರ್ಶನ್ ತುಟಿಬಿಚ್ಚಿದ್ದಾರೆ.
ಇದೀಗ ತಮ್ಮ ರಾಜಕಿಯ ಎಂಟ್ರಿ ಬಗ್ಗೆ ಸುವರ್ಣ ನ್ಯೂಸ್ & ಕನ್ನಡ ಪ್ರಭ ಜೊತೆ ದರ್ಶನ್ EXCLUSIVE ಮಾತುಗಳನ್ನಾಡಿರುವ ದರ್ಶನ್, ತಮ್ಮ ರಾಜಕೀಯ ಪ್ರವೇಶವನ್ನು ತಳ್ಳಿಹಾಕಿದ್ದಾರೆ. ಇದೇವೇಳೆ ರಾಜಕೀಯ ಸೇರುವ ಆಸಕ್ತಿ ಇಲ್ಲ ಅಂತ ಸ್ಪಷ್ಟಪಡಿಸಿದ್ದಾರೆ. ಕಂಡ ಕಂಡವರಿಗೆ ಸಲಾಮು ಹೊಡೆಯಲು ನನಗೆ ಬರೋದಿಲ್ಲ, ಸಲಾಮು ಸಂಸ್ಕೃತಿಯನ್ನು ರಾಜಕಾರಣ ಒಳಗೊಂಡಿದೆ, ಹೀಗಾಗಿ ರಾಜಕಾರಣಕ್ಕೂ ನನಗೂ ಆಗಿಬರಲ್ಲ ಅಂತ ಖಡಕ್ ಆಗಿ ಹೇಳಿದ್ರು.
ನನಗೆ ಈಗ ಸಿನಿಮಾ ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ. ಒಂದು ವೇಳೆ ರಾಜಕೀಯಕ್ಕೆ ಹೋಗೋದಾದ್ರೆ ಎಲ್ಲರಿಗೂ ತಿಳಿಸುವೆ. ಗುಟ್ಟಾಗಿ ರಾಜಕೀಯಕ್ಕೆ ಹೋಗುವ ಅನಿರ್ವಾಯ ನನಗಿಲ್ಲ ಅಂತ ಹೇಳಿ ರಾಜಕೀಯ ಪ್ರವೇಶದ ಬಗೆಗಿನ ಎಲ್ಲಾ ವದಂತಿಗಳಿಗೆ ತೆರೆ ಎಳೆದ್ರು.
Comments