ಹೊಸ ಸಾಹಸಕ್ಕೆ ಕೈ ಹಾಕಿದ ನಟಿ ಕಂಗನಾ, ಮಕ್ಕಳ ಚಿತ್ರಕ್ಕೆ ನಟಿ ಕಂಗನಾ ನಿರ್ದೇಶಕಿ ?
ನಟನೆ ಮೂಲಕ ಮೂರು ಬಾರಿ ರಾಷ್ಟ್ರ ಪ್ರಶಸ್ತಿ ತನ್ನದಾಗಿಸಿಕೊಂಡಿರುವ ಕಂಗನಾ ರಣೌತ್ ಈಗ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ನಿರ್ದೇಶಕಿ ಆಗಬೇಕೆಂಬ ತವಕ ಕಂಗನಾ ಅವರಲ್ಲಿ ಮೂಡಿದೆ.
ಮುಂಬೈ: ಎಲ್ಲಾ ವರ್ಗದ ಜನರನ್ನು ತಲುಪಬೇಕು ಎಂಬ ದೃಷ್ಟಿಯಿಂದ ಮಕ್ಕಳ ಸಿನಿಮಾವನ್ನು ಕೈಗೆತ್ತಿಕೊಂಡಿದ್ದೇನೆ, ನಿಜಕ್ಕೂ ಇದು ಸವಾಲಿನ ಕೆಲಸ ಎಂದು ಹೇಳುತ್ತಿರುವ ನಟಿ ಕಂಗನಾ ಬಗ್ಗೆ ಸಾಕಷ್ಟು ವಿವಾದಗಳಿದ್ದರೂ ಸಿನಿಮಾ ನಿರ್ದೇಶನದ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದ್ದಾರೆ. ನಟನೆ ಮೂಲಕ ಮೂರು ಬಾರಿ ರಾಷ್ಟ್ರ ಪ್ರಶಸ್ತಿ ತನ್ನದಾಗಿಸಿಕೊಂಡಿರುವ ಕಂಗನಾ ರಣೌತ್ ಈಗ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ. ನಿರ್ದೇಶಕಿ ಆಗಬೇಕೆಂಬ ತವಕ ಕಂಗನಾ ಅವರಲ್ಲಿ ಮೂಡಿದೆ. ಬಾಲಿವುಡ್ ಕ್ವಿನ್ ಕಂಗನಾ ಮಕ್ಕಳ ಚಿತ್ರವೊಂದನ್ನು ನಿರ್ದೇಶನ ಮಾಡಲಿದ್ದು, ಇದರತ್ತ ಗಮನ ಕೇಂದ್ರಿಕರಿಸಲಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಕಂಗನಾ ಆಕ್ಷನ್ ಕಟ್ ಹೇಳಲಿರುವ ಚಿತ್ರಕ್ಕೆ ತೇಜು ಎಂದು ಹೆಸರಿಡಲಾಗಿದೆ. ಇದು ಮಕ್ಕಳ ಚಿತ್ರ. ಈ ಚಿತ್ರಕ್ಕಾಗಿ ಅವರು ಬ್ಯೂಸಿಯಾಗಿದ್ದಾರಂತೆ. ಸೆ.15ರಂದು ಈ ಚಿತ್ರ ತೆರೆಗೆ ಬರಲಿದ್ದು, ಆ ಬಳಿಕ ಕಂಗನಾ ಮಣಿಕರ್ಣಿಕಾ ಚಿತ್ರದ ಶೂಟಿಂಗ್ ನಲ್ಲಿ
ಭಾಗಿಯಾಗಲಿದ್ದಾರೆ.
ಕೆಲ ವರ್ಷಗಳಿಂದ ಕಂಗನಾ ಮಕ್ಕಳ ಚಿತ್ರವೊಂದನ್ನು ನಿರ್ದೇಶನ ಮಾಡಬೇಕೆಂಬ ಇಚ್ಛೆ ಹೊಂದಿದ್ದರು. ಆದ್ರೆ ಆ ಕಾಲ ಇದೀಗ ಕೂಡಿ ಬಂದಿದ್ದು, ಚಿತ್ರಕಥೆ, ನಿರ್ದೇಶನದ ಬಗ್ಗೆ ಸಾಕಷ್ಟು ಆಸಕ್ತಿ ಹೊಂದಿರುವ ನಟಿ ಕಂಗನಾ ರಣೌತ್, ಇತ್ತೀಚ್ಚಿಗೆ ಸಾಕಷ್ಟು ವಿವಾದಗಳಿಂದ ಸುದ್ದಿಯಾಗಿದ್ದರು. ವಿವಾದಗಳೇ ಅವರ ಸುತ್ತ ಸುತ್ತಕೊಂಡಿದ್ದವು. ಸಿಮ್ರಾನ್ ಚಿತ್ರದ ನಿರ್ದೇಶಕರ ಜತೆಗೂ ಕಿರಿಕ್ ಮಾಡಿಕೊಂಡಿದ್ದರು.
Comments