ಕ್ರಿಕೆಟಿಗ ಅಜರ್ ಜೊತೆಗೆ ಮದುವೆ ಸುದ್ದಿ ಬಗ್ಗೆ ತಮನ್ನಾ ಹೇಳಿದ್ದು ಏನು?

10 Sep 2017 12:11 PM | Entertainment
439 Report

ಪಾಕಿಸ್ತಾನದ ಮಾಜಿ ಕ್ರಿಕೆಟ್ ರ ಅಬ್ದುಲ್ ರಜಾಕ್ ಜತೆಗೆ ಶ್ವೇತ ಸುಂದರಿ ತಮನ್ನಾ ಭಾಟಿಯಾ ಮದುವೆ ಗಾಸಿಪ್ ಎಲ್ಲಾ ಕಡೆ ಕೇಳಿ ಬಂದಿತ್ತು . ಜ್ಯುವೆಲರಿ ಮಳಿಗೆಯೊಂದರ ಉದ್ಘಾಟನಾ ಕಾರ್ಯಕ್ರಮದಲ್ಲಿನಲ್ಲಿ ನಟಿ ತಮನ್ನಾ ಹಾಗೂ ಮಾಜಿ ಕ್ರಿಕೆಟಿಗ ಅಬ್ದುಲ್ ರಜಾಕ್ ಜತೆಯಾಗಿ ಕಾಣಿಸಿಕೊಂಡಿದ್ದರು. ಅಂದಿನಿಂದ ಇಬ್ಬರ ಮಧ್ಯೆ ಸ್ನೇಹ ಮದುವೆಯತ್ತ ತಿರುಗಿದೆ ಎಂದು ರೂಮರ್ಸ್ ಕೇಳಿ ಬಂದಿತ್ತು. ಆಜರೆ ಈಗ ನಟಿ ತಮನ್ನಾ ಈ ಬಗ್ಗೆ ಸ್ಪಷ್ಟನೆ ನೀಡಿದ್

ಪಾಕಿಸ್ತಾನದ ಮಾಜಿ ಕ್ರಿಕೆಟ್ ರ ಅಬ್ದುಲ್ ರಜಾಕ್ ಜತೆಗೆ ಶ್ವೇತ ಸುಂದರಿ ತಮನ್ನಾ ಭಾಟಿಯಾ ಮದುವೆ ಗಾಸಿಪ್ ಎಲ್ಲಾ ಕಡೆ ಕೇಳಿ ಬಂದಿತ್ತು . ಜ್ಯುವೆಲರಿ ಮಳಿಗೆಯೊಂದರ ಉದ್ಘಾಟನಾ ಕಾರ್ಯಕ್ರಮದಲ್ಲಿನಲ್ಲಿ ನಟಿ ತಮನ್ನಾ ಹಾಗೂ ಮಾಜಿ ಕ್ರಿಕೆಟಿಗ ಅಬ್ದುಲ್ ರಜಾಕ್ ಜತೆಯಾಗಿ ಕಾಣಿಸಿಕೊಂಡಿದ್ದರು. ಅಂದಿನಿಂದ ಇಬ್ಬರ ಮಧ್ಯೆ ಸ್ನೇಹ ಮದುವೆಯತ್ತ ತಿರುಗಿದೆ ಎಂದು ರೂಮರ್ಸ್ ಕೇಳಿ ಬಂದಿತ್ತು. ಆಜರೆ ಈಗ ನಟಿ ತಮನ್ನಾ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

‘ಸದ್ಯಕ್ಕಂತೂ ನನಗೆ ಮದುವೆಯಾಗುವ ಯಾವುದೇ ಯೋಜನೆಯಿಲ್ಲ. ನನ್ನ ಸಿನಿಮಾ ಕೆಲಸಗಳಲ್ಲಿ ನಾನು ಬ್ಯುಸಿ. ಮದುವೆಯಾಗುವುದಿದ್ದರೆ ಎಲ್ಲರಿಗೂ ಹೇಳಿಯೇ ಆಗುತ್ತೇನೆ. ಕದ್ದು ಮುಚ್ಚಿ ಆಗುವ ಅಗತ್ಯವಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಬ್ದುಲ್ ರಜಾಕ್ ಜತೆಗೆ ತಮನ್ನಾ ಭಾಟಿಯಾ ಜತೆಗಿದ್ದ ಫೊಟೋಗಳು ದೊರೆತಿದ್ದು, ಇಬ್ಬರ ಮಧ್ಯೆ ಅಫೇರ್ ಇದೆ ಎಂಬ ಸುದ್ದಿ ಅಭಿಮಾನಿಗಳಿಗೆ ಸ್ವಲ್ಪ ಕುತೂಹಲ ಮೂಡಿಸಿತ್ತು. ಕೆಲ ಮೂಲಗಳ ಪ್ರಕಾರ ಇಬ್ಬರು ಶೀರ್ಘದಲ್ಲೇ ಮದುವೆಯಾಗುವ ಯೋಜನೆಯಲ್ಲಿದ್ದಾರೆ ಎಂದು ಹೇಳಲಾಗುತ್ತಿತ್ತು.ಆದ್ರೆ ಇದೆಲ್ಲಾ ಸುಳ್ಳು ಎಂದು ತಮನ್ನಾ ಸ್ಪಷ್ಟನೆ ನೀಡಿದ್ದಾರೆ.

 
ಎಲ್ಲದಕ್ಕೂ ಕಾರಣವಾಗಿದ್ದು ರಜಾಕ್ ಜತೆಗಿನ ತಮನ್ನಾ ಫೋಟೋ. ಅಸಲಿಗೆ ಇದು ತುಂಬಾ ಹಳೆಯ ಫೋಟೋ ಆಗಿತ್ತು. ಯಾವುದೋ ಜ್ಯುವೆಲ್ಲರಿ ಶಾಪ್ ಉದ್ಘಾಟನೆಗೆ ಹೋಗಿದ್ದ ಸಂದರ್ಭ ತೆಗೆದ ಫೋಟೋ ಇದಾಗಿತ್ತು. ಇಷ್ಟಕ್ಕೇ ಗಾಸಿಪ್ ಪ್ರಿಯರು ಆಕೆಯ ಮದುವೆ ಆಗೇ ಹೋಯ್ತು ಎಂದು ಮಾತನಾಡುವುದಾ?

Edited By

venki swamy

Reported By

Sudha Ujja

Comments