ಅಬ್ದುಲ್ ರಜಾಕ್ ಜತೆಗೆ ನಟಿ ತಮನ್ನಾ ಮದುವೆ ?

ಪಾಕಿಸ್ತಾನದ ಮಾಜಿ ಕ್ರಿಕೆಟ್ ರ ಅಬ್ದುಲ್ ರಜಾಕ್ ಜತೆಗೆ ಶ್ವೇತ ಸುಂದರಿ ತಮನ್ನಾ ಭಾಟಿಯಾ ಮದುವೆ ವಿಷಯ ಈಗ ಎಲ್ಲಾ ಕಡೆಗಳಲ್ಲಿ ಕೇಳಿ ಬರುತ್ತಿದೆ. ಜ್ಯುವೆಲರಿ ಮಳಿಗೆಯೊಂದರ ಉದ್ಘಾಟನಾ ಕಾರ್ಯಕ್ರಮದಲ್ಲಿನಲ್ಲಿ ನಟಿ ತಮನ್ನಾ ಹಾಗೂ ಮಾಜಿ ಕ್ರಿಕೆಟಿಗ ಅಬ್ದುಲ್ ರಜಾಕ್ ಜತೆಯಾಗಿ ಕಾಣಿಸಿಕೊಂಡಿದ್ದರು. ಅಂದಿನಿಂದ ಇಬ್ಬರ ಮಧ್ಯೆ ಸ್ನೇಹ ಮದುವೆಯತ್ತ ತಿರುಗಿದೆ ಎಂದು ರೂಮರ್ಸ್ ಈಗಾಗಲೇ ಕೇಳಿ ಬರುತ್ತಿದೆ.
ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಬ್ದುಲ್ ರಜಾಕ್ ಜತೆಗೆ ತಮನ್ನಾ ಭಾಟಿಯಾ ಜತೆಗಿದ್ದ ಫೊಟೋಗಳು ದೊರೆತಿದ್ದು, ಇಬ್ಬರ ಮಧ್ಯೆ
ಅಫೇರ್ ಇದೆ ಎಂಬ ಸುದ್ದಿ ಅಭಿಮಾನಿಗಳಿಗೆ ಸ್ವಲ್ಪ ಕುತೂಹಲ ಮೂಡಿಸಿದೆ. ಕೆಲ ಮೂಲಗಳ ಪ್ರಕಾರ ಇಬ್ಬರು ಶೀರ್ಘದಲ್ಲೇ ಮದುವೆಯಾಗುವ ಯೋಜನೆಯಲ್ಲಿದ್ದಾರೆ ಎಂದು
ಹೇಳಲಾಗುತ್ತಿದೆ. ಈ ಸುದ್ದಿ ಇಡೀ ನಟಿ ತಮನ್ನಾ ಅಭಿಮಾನಿಗಳಿಗೆ ಶಾಕಿಂಗ್ ಉಂಟು ಮಾಡಿದೆ.
ಆಭರಣ ಮಳಿಗೆ ಯೊಂದರಲ್ಲಿ ತಮನ್ನಾ ಹಾಗೂ ರಜಾಕ್ ಇಬ್ಬರು ಒಟ್ಟಿಗೆ ನಿಂತಿರುವ ಫೊಟೋಗಳು ದೊರೆತಿವೆ. ಇಬ್ಬರು ಜೋಡಿಗಳು ಆಭರಣ ಖರೀದಿ ಮಾಡುತ್ತಿದ್ದಾರೆ ಎಂಬ ಸುದ್ದಿ ಕೇಳಿ ಬಂದಿದೆ. ಆದ್ಜರಿಂದ ಇಬ್ಬರು ಎಂಗೇಜ್ ಮೆಂಟ್ ಆಗಲಿದ್ದಾರೆ ಎಂಬ ಸುದ್ದಿ ಹರಡಿದೆ. ಆದರೆ ಸತ್ಯ ಏನೆಂದರೆ ಇಬ್ಬರು ಆಭರಣ ಮಳಿಗೆಯೊಂದರ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿದ್ದರು. ಈ ವೇಳೆ ಇಬ್ಬರ ಮಧ್ಯೆ ಪರಿಚಯವಾಗಿತ್ತು. ಆದ್ರೆ ಇಬ್ಬರ ಮಧ್ಯೆ ಅಂಥದ್ದೇನು ಇಲ್ಲ ಆದ್ರೂ ಇಬ್ಬರ ಬಗೆಗಿನ ಸಂಬಂಧದ ಬಗ್ಗೆ ಗಾಸಿಪ್ ಕೇಳಿ ಬರುತ್ತಿದೆ.
ಪಾಕಿಸ್ತಾನ ಮಾಜಿ ಕ್ರಿಕೆಟಿಗ ಅಬ್ದುಲ್ ರಜಾಕ್ ಮದುವೆಯಾಗಿದ್ದಾರೆ. ಭಾರತದಲ್ಲಿ ನಡೆದ ಕಾರ್ಯಕ್ರಮ ವೊಂದರಲ್ಲಿ ಭಾಗಿಯಾಗಿದ್ದರು. ಪಾಕಿಸ್ತಾನದ ಕ್ರಿಕೆಟಿಗರ ಜತೆಗೆ ನಟಿಯರ ಮದುವೆ ವಿಷಯ ಕೇಳಿ ಬರುತ್ತಿರುವುದು ಇದೇ ಮೊದಲನೇವಲ್ಲ. ಕೆಲ ವರ್ಷಗಳ ಹಿಂದೆಯಷ್ಟೇ ಶೊಯೆಬ್ ಮಲ್ಲಿಕ್ ಹಾಗೂ ಭಾರತದ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಜತೆಗೆ ಅಫೇರ್ ಕೇಳಿ ಬಂದಿತ್ತು. ನಂತರ ಅವರಿಬ್ಬರು ಮದುವೆಯಾಗಿದ್ದರು.
Comments