ನಟ 'ಸಲ್ಮಾನ್ ಖಾನ್' ಗೆ ಕಾಲೆಳೆದ ಜನರು !

ಮುಂಬೈ : ಬಾಲಿವುಡ್ ದಬ್ಬಾಂಗ್ ಖಾನ್ ಸಲ್ಮಾನ್ ಖಾನ್ ದುಬೈನಲ್ಲಿ ಡ್ರೈವಿಂಗ್ ಸ್ಕೂಲ್ ಅನ್ನು ಚಾಲನೆ ಮಾಡಿದರು. ಈ ಕುರಿತು ಸಲ್ಲು ವಿರುದ್ಧ ಟ್ವಿಟರ್ ನಲ್ಲಿ ಟೀಕೆಗಳು ಕೇಳಿ ಬಂದಿವೆ. ಕೆಲವರು ಸಲ್ಲು ಬಗ್ಗೆ ವ್ಯಂಗ್ಯ ಮಾತನಾಡಿ, ಸಲ್ಮಾನ್ ಖಾನ್ ಡ್ರೈವಿಂಗ್ ಸ್ಕೂಲ್ ಉದ್ಘಾಟಿಸಿದರೆ? ಮುಂದೆ ರಾಮ್ ರಹೀಂ ಸಿಂಗ್ ನಾರಿ ನಿಕೇತನ ಉದ್ಘಾಟಿಸಬಹುದು ಎಂದು ಬರೆದಿದ್ದಾರೆ.
ಇನ್ನೊಂದು ಟ್ವೀಟ್ ನಲ್ಲಿ ಡ್ರೈವಿಂಗ್ ಸ್ಕೂಲ್ ಆಯ್ತು ಇನ್ನು ಕೃಷ್ಣ ಮೃಗ ಸಂರಕ್ಷಣಾ ಅಭಿಯಾನವೋ ಎಂದು ವ್ಯಂಗ್ಯ ನುಡಿದಿದ್ದಾರೆ. ಸಲ್ಮಾನ್ ಒತ್ತಾಯದಿಂದ ರಿಬ್ಬನ್ ಕತ್ತರಿಸಿ ಬೆನ್ನಲ್ಲೇ ಟ್ವಿಟರ್ ನಲ್ಲಿ ನೂರಾರು ಟ್ವೀಟ್ ಗಳು ಹರಿದು ಬಂದಿದ್ದು, ಹಿಟ್ ಆಂಡ್ ರನ್ ಪ್ರಕರಣವನ್ನು ನೆನಪಿಸಿದ್ದಾರೆ. ಸಲ್ಮಾನ್ ಖಾನ್ ಉದ್ಘಾಟಿಸಿರುವ ಸ್ಕೂಲ್ ನಲ್ಲಿ ನಿರ್ಗತಿಕರು ಬೀದಿ ಬದಿಯಲ್ಲಿ ಮಲಗಿದರೆ ಕಾರು ಹೇಗೆ ಹತ್ತಿಸಬೇಕೆಂಬುದನ್ನು ಕಲಿಸಬಹುದಲ್ಲ ಎಂದು ಕಾಲೆಳೆಯಲಾಗಿದೆ. ಇನ್ನೋರ್ವ ವ್ಯಕ್ತಿ ಮಾಡಿರುವ ಟ್ವೀಟ್ ನಲ್ಲಿ 'ಓ ಡ್ರೈವಿಂಗ್ ಸ್ಕೂಲ್ ಉದ್ಘಾಟಿಸಿದರೆ, ಮುಂದಿನ ದಿನಗಳಲ್ಲಿ ಹಂಟಿಂಗ್ ಸ್ಕೂಲ್ ಉದ್ಘಾಟಿಸುತ್ತಾರೇನೋ ಎಂದು ಟ್ವಿಟ್ ಮಾಡಲಾಗಿದೆ.
ಮತ್ತೊಂದು ಟ್ವೀಟ್ ನಲ್ಲಿ ಡ್ರೈವಿಂಗ್ ಸ್ಕೂಲ್ ಆಯ್ತು, ಈಗ ಕೃಷ್ಣ ಮೃಗ ಸಂರಕ್ಷಣಾ ಅಭಿಯಾನವೋ ಎಂದು ವ್ಯಂಗ್ಯವಾಡಿದ್ದಾರೆ. 2002ರಲ್ಲಿ ಫುಟ್ ಬಾತ್ ನಲ್ಲಿ ಮಲಗಿದ್ದವರ ಮೇಲೆ ಕಾರು ಹತ್ತಿಸಿ ಓರ್ವ ವ್ಯಕ್ತಿಯ ಸಾವಿಗೆ ಕಾರಣವಾಗಿದ್ದ ಆರೋಪವಿದೆ.
Comments