ಅಭಿಮಾನಿಯ ಮೊಬೈಲ್ ಒಡೆದು ಹಾಕಿದ ನಟ ಸಲ್ಮಾನ್ ಖಾನ್
ಮುಂಬೈ: ಬಾಲಿವುಡ್ ದಬ್ಬಾಂಗ್ ಖಾನ್ ಸಲ್ಮಾನ್ ಖಾನ್ ಒಂದು ಅವಾರ್ಡ್ ಫಂಕ್ಷನ್ ನಲ್ಲಿ ಭಾಗಿಯಾಗಿದ್ದ ವೇಳೆ ಘಟನೆಯೊಂದು ನಡಿದಿದೆ. ಫಂಕ್ಷನ್ ನಲ್ಲಿ ಸಲ್ಲು ತಮ್ಮ ಅಭಿಮಾನಿಯೊಬ್ಬರ ಮೊಬೈಲ್ ತೆಗೆದುಕೊಂಡು ಒಡೆದು ಹಾಕಿದ ಘಟನೆ ವರದಿಯಾಗಿದೆ.
ಮುಂಬೈ: ಬಾಲಿವುಡ್ ದಬ್ಬಾಂಗ್ ಖಾನ್ ಸಲ್ಮಾನ್ ಖಾನ್ ಒಂದು ಅವಾರ್ಡ್ ಫಂಕ್ಷನ್ ನಲ್ಲಿ ಭಾಗಿಯಾಗಿದ್ದ ವೇಳೆ ಘಟನೆಯೊಂದು ನಡಿದಿದೆ. ಫಂಕ್ಷನ್ ನಲ್ಲಿ ಸಲ್ಲು ತಮ್ಮ ಅಭಿಮಾನಿಯೊಬ್ಬರ ಮೊಬೈಲ್ ತೆಗೆದುಕೊಂಡು ಒಡೆದು ಹಾಕಿದ ಘಟನೆ ವರದಿಯಾಗಿದೆ.
ಪ್ರಶಸ್ತಿ ಸಮಾರಂಭ ಕಾರ್ಯಕ್ರಮದಲ್ಲಿ ಸಲ್ಮಾನ್ ತಮ್ಮ ಕುಟುಂಬ ಹಾಗೂ ಸ್ನೇಹಿತರ ಜತೆ ಮಾತನಾಡುತ್ತಿದ್ದರು. ಇದೇ ವೇಳೆ ಒಬ್ಬ ಅಭಿಮಾನಿ ಸಲ್ಲು ಹತ್ತಿರ ಬಂದು ತನ್ನ ಮೊಬೈಲ್ ತೊರಿಸಿತೊಡಗಿದ. ತನಗಿದ್ದ ಹವ್ಯಾಸದ ಬಗ್ಗೆ ಹೇಳತೊಡಗಿದ. ಇದನ್ನು ನಿರ್ಲಕ್ಷಿಸಿದ ಸಲ್ಲು ಮತ್ತೆ ತಮ್ಮ ಕುಟುಂಬದವರ ಜತೆ ಮಾತು ಕತೆಯಲ್ಲಿ ತೊಡಗಿದ್ದರು. ಆದ್ರೂ ಆ ಅಭಿಮಾನಿ ಸುಮ್ಮನಿರಲಿಲ್ಲ. ಮತ್ತೆ ಸಲ್ಲು ಹತ್ತಿರ ಹೋಗಿ ಮಾತನಾಡತೊಡಗಿದ. ಇದರಿಂದ ಸಿಟ್ಟಿಗೆದ್ದ ಸಲ್ಮಾನ್ ಆತನ ಹತ್ತಿರ ಇದ್ದ ಮೊಬೈಲ್ ಕಸಿದುಕೊಂಡು ಜೋರಾಗಿ ನೆಲಕ್ಕೆ ಹೊಡೆದಿದ್ದಾರೆ. ಇಷ್ಟಾದ್ರು ಫೋನ್ ಮಾತ್ರ ಹಾಗೇ ಇತ್ತು. ಆದ್ರು ಸಲ್ಲು ಕೋಪ ಇಷ್ಟಕ್ಕೆ ನಿಲ್ಲಲಿಲ್ಲ. ಮತ್ತೆ ಫೋನ್ ತೆಗೆದುಕೊಂಡು ಜೋರಾಗಿ ಒಡೆದು ಹಾಕಿದರು. ಅಲ್ಲಿ ನೆರದಿದ್ದ ಇದನ್ನು ವೀಕ್ಷಿಸುತಿದ್ದ ಜನರಿಗಂತು ಸಲ್ಲು ವರ್ತನೆ ನೋಡಿ ಆಶ್ಚರ್ಯ ಆಯಿತಂತೆ.
Comments