ಕಿಂಗ್ ಆಂಡ್ ಕ್ವಿನ್ ಜತೆಯಾಗಿ ನಟಿಸುತ್ತಾರಾ ?
ಮುಂಬೈ: ಬಾಲಿವುಡ್ ಬಾದ್ ಶಾ ಶಾರೂಖ್ ಖಾನ್ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಚಿತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಕೇಳಿ ಬರುತ್ತಿದೆ. ವಿಶೇಷವೆಂದರೆ ಶಾರೂಖ್ ಜತೆಗೆ ಬಾಲಿವುಡ್ ಕ್ವಿನ್ ಕಂಗನಾ ನಟಿಸಲಿದ್ದಾರಾ? ಎಂಬ ಸುದ್ದಿ ಕೇಳಿ ಬರುತ್ತಿದೆ.
ಕಿಂಗ್ ಖಾನ್ ಶಾರೂಖ್ 'ದೇವದಾಸ್' ಚಿತ್ರದ ಬಳಿಕ, ಅಂದರೆ ಸರಿ ಸುಮಾರು 15 ವರ್ಷಗಳ ಬಳಿಕ ಮತ್ತೆ ಬನ್ಸಾಲಿ ಜತೆಗೆ ಕೆಲಸ ಮಾಡ್ತಾರೆ ಎಂಬ ಸುದ್ದಿ ಚರ್ಚೆಯಾಗುತ್ತಿದೆ. ಇದು ಕಿಂಗ್ ಖಾನ್ ಶಾರೂಖ್ , ಕ್ವಿನ್ ಕಂಗನಾ ರನೌತ್ ಅಭಿಮಾನಿಗಳಿಗಂತೂ ಹೆಚ್ಚು ಎಕ್ಸೆಟ್ ಆಗುವಂತೆ ಮಾಡಿದೆ. ಮೂಲಗಳ ಪ್ರಕಾರ, ಎಸ್ ಆರ್ ಕೆ (ಶಾರೂಖ್ ಖಾನ್ ) ಈಗಾಗ್ಲೇ ಬನ್ಸಾಲಿ ಜತೆಗೆ ಚಿತ್ರದ ಕುರಿತು ಮಾತುಕತೆ ನಡೆಸಿದ್ದಾರೆ. ಶೀರ್ಘದಲ್ಲೇ ಬನ್ಸಾಲಿ ಮುಂದಿನ ಚಿತ್ರದಲ್ಲಿ ಶಾರೂಖ್ ನಟಿಸುವ ಸಾಧ್ಯತೆ ಇದೆ. ಸದ್ಯ ಆನಂದ್ ರೈ ಅವರ ಮತ್ತೊಂದು ಸಿನಿಮಾದ ಶೂಟಿಂಗ್ ನಲ್ಲಿ ಶಾರೂಖ್ ಖಾನ್ ಬ್ಯೂಸಿ ಇದ್ದಾರೆ. ಈ ಚಿತ್ರ ಮುಂದಿನ ವರ್ಷ ಕ್ರಿಸ್ಮಸ್ ಹಬ್ಬದಂದು ತೆರೆಗೆ ಬರಲಿದೆ.
ಮತ್ತೊಂದು ಮೂಲಗಳ ಪ್ರಕಾರ, ಬನ್ಸಾಲಿ ತಮ್ಮ ಮುಂದಿನ ಚಿತ್ರದಲ್ಲಿ ಬಾಲಿವುಡ್ ನ ಕ್ವಿನ್ ಕಂಗನಾ ರನೌತ್ ಅವರನ್ನು ತರಲು ಪ್ಲ್ಯಾನ್ ಮಾಡಿಕೊಂಡಿದ್ದಾರಂತೆ. ಫಿಮೇಲ್ ಲೀಡ್ ರೋಲ್ ನಲ್ಲಿ ಶಾರೂಖ್ ಜತೆಗೆ ಬಿಗ್ ಸ್ಕ್ರೀನ್ ಮೇಲೆ ಕಂಗನಾ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಶೀರ್ಘದಲ್ಲೇ ಅಧಿಕೃತ ಮಾಹಿತಿ ಬರಬೇಕಿದೆ.
Comments