ಕನ್ನಡ ಚಿತ್ರರಂಗದ ಪ್ರಸಿದ್ಧ ಪೋಷಕ ನಟ ಲಂಬು ನಾಗೇಶ್ ಇನ್ನಿಲ್ಲ

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಲಂಬು ನಾಗೇಶ್ ಎಂದೇ ಪ್ರಸಿದ್ದರಾಗಿದ್ದ ಪೋಷಕ ನಟ ನಾಗೇಶ್ ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ನಾಗೇಶ್ ರಾತ್ರಿ 8 ಗಂಟೆ ಸುಮಾರಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಬಹು ಅಂಗಾಂಗ ವೈಫಲ್ಯಕ್ಕೆ ತುತ್ತಾಗಿದ್ದ ನಾಗೇಶ್, ಕಳೆದ ಐದು ದಿನಗಳಿಂದ ನಗರದ ಎಮ್. ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.
ಕನ್ನಡದಲ್ಲಿ ಸುಮಾರು 100ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ನಾಗೇಶ್ ಅವರು ಚಿತ್ರರಂಗದಲ್ಲಿ ಲಂಬು ನಾಗೇಶ್ ಅಂತಲೇ ಪ್ರಸಿದ್ಧರಾಗಿದ್ದರು.ದೇವರಾಜ್ ಅಭಿನಯದ 'ಹುಲಿಯಾ', ಸಾಯಿಕುಮಾರ್ ನಟನೆಯ 'ಪೋಲೀಸ್ ಸ್ಟೋರಿ-2' ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ಲಂಬು ನಾಗೇಶ್ ಕಾಣಿಸಿಕೊಂಡಿದ್ದರು.
ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲದೇ ಕನ್ನಡದ 50ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಲಂಬು ನಾಗೇಶ್ ನಟಿಸಿದ್ದರು, ಇತ್ತೀಚೆಗೆ ಪ್ರಸಾರ ವಾಗುತ್ತಿದ್ದ ಅಶ್ವಿನಿ ನಕ್ಷತ್ರ, ಹಾಗೂ ದುರ್ಗಾ ಧಾರಾವಾಹಿಗಳಲ್ಲೂ ನಾಗೇಶ್ ನಟಿಸಿದ್ದರು. ಬನಶಂಕರಿಯಲ್ಲಿ ಇಂದು ಅಂತಿಮ ಸಂಸ್ಕಾರ ನೆರವೇರಲಿದೆ.
Comments