ಮತ್ತೆ ಒಂದಾದ ಸುದೀಪ್ ಪ್ರಿಯಾ: ವಿಚ್ಛೇದನ ಅರ್ಜಿ ಹಿಂಪಡೆದ ದಂಪತಿ
ಬೆಂಗಳೂರು :ಸುದೀಪ್ ಮತ್ತು ಪ್ರಿಯಾ ದಂಪತಿ ಮತ್ತೆ ಒಂದಾಗಿದ್ದಾರೆ. ವಿಚ್ಛೇದನ ಕೋರಿ ಫ್ಯಾಮಿಲಿ ಕೋರ್ಟ್'ಗೆ ತಾವು ಸಲ್ಲಿಸಿದ್ದ ವಿಚ್ಛೇದನ ಅರ್ಜಿಯನ್ನು ಸುದೀಪ್ ಮತ್ತು ಪ್ರಿಯಾ ಹಿಂಪಡೆದಿದ್ದಾರೆ.
ಕಳೆದ 2 ವರ್ಷಗಳ ಹಿಂದೆ ಸುದೀಪ್ ಮತ್ತು ಪ್ರಿಯಾ ಫ್ಯಾಮಿಲಿ ಕೋರ್ಟ್'ಗೆ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೀಗ ಇದನ್ನು ಹಿಂಪಡೆಯುವ ಮೂಲಕ ತಮ್ಮಿಬ್ಬರ ನಡುವಿನ ಮನಸ್ತಾಪವನ್ನು ಇಬ್ಬರೂ ಒಂದಾಗಿದ್ದಾರೆ. ಇತ್ತೀಚೆಗೆ ತಮ್ಮ ಮಗಳ ಶಾಲಾ ಕಾರ್ಯಕ್ರಮ ಸೇರಿದಂತೆ, ಹಲವಾರು ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಇಬ್ಬರೂ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದು, ಇಬ್ಬರೂ ಒಂದಾಗುವ ಸೂಚನೆ ನೀಡಿತ್ತು.
Comments