ಕನ್ನಡ ಕಿರುತೆರೆ ನಟಿ ರಚನಾ, ನಟ ಜೀವನ್ ದುರ್ಮರಣ

ಕನ್ನಡ ಕಿರುತೆರೆ ನಟಿ ರಚನಾ, ನಟ ಜೀವನ್ ದುರಂತ ಅಂತ್ಯಕಂಡಿದ್ದಾರೆ. ಕುಕ್ಕೆ ಸುಬ್ರಮಣ್ಯಕ್ಕೆ ಹೋಗಿ ಬೆಂಗಳೂರಿಗೆ ವಾಪಸ್ ಬರುವಾಗ ಅವರಿದ್ದ ವಾಹನ ಅಪಘಾತಕ್ಕೀಡಾಗಿದೆ. ಈ ದುರ್ಘಟನೆಯಲ್ಲಿ ಮಹಾನದಿ ಸೀರಿಯಲ್ ಖ್ಯಾತಿಯ ರಚನಾ(23) ಹಾಗೂ ಸಹನಟ ಜೀವನ್(25) ಮೃತಪಟ್ಟಿದ್ದಾರೆ.
ನೆಲಮಂಗಲ ತಾಲೂಕು ಸೋಲೂರು ಬಳಿ ರಚನಾ ಹಾಗೂ ಜೀವನ್ ಅವರಿದ್ದ ಸಫಾರಿ ಕಾರು ಅಪಘಾತವಾಗಿದೆ. ನಿಂತಿದ್ದ ಟ್ಯಾಂಕರ್ ಡಿಕ್ಕಿಯಾದ ಪರಿಣಾಮ ಇಬ್ಬರು ಮೃತಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 48ರ ಕುದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಸಫಾರಿ ವಾಹನದಲ್ಲಿದ್ದ ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಎಲ್ಲರೂ ಹರ್ಷಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಂಜಿತ್, ಉತ್ತಮ್, ಹೊನ್ನೇಶ್, ಕಾರ್ತಿಕ್, ಎರಿಕ್ ಪ್ರಾಣಾಪಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಕುಕ್ಕೆ ಸುಬ್ರಮಣ್ಯ ದೇಗುಲಕ್ಕೆ ಹೋಗಿದ್ದ ಮಹಾನದಿ, ತ್ರಿವೇಣಿ ಸಂಗಮ, ಮಧು ಬಾಲಾ ಕನ್ನಡ ಧಾರಾವಾಹಿ ಖ್ಯಾತಿ ನಟಿ ರಚನಾ(23) ಹಾಗೂ ಇತರರು ಗೆಳೆಯ ಕಾರ್ತಿಕ್ ಅವರ ಹುಟ್ಟುಹಬ್ಬ ಆಚರಿಸಿಕೊಂಡು ಬೆಂಗಳೂರಿಗೆ ಹಿಂತಿರುಗುತ್ತಿದ್ದರು. ಗುರುವಾರ ಮುಂಜಾನೆ ನಿದ್ದೆ ಮಂಪರಿನಲ್ಲಿ ವಾಹನ ಚಲಾಯಿಸಿದ್ದರಿಂದ ಅಪಘಾತ ಸಂಭವಿಸಿದೆ.
Comments