ಆಗಸ್ಟ್ 28ರಂದು ಆರಂಭಗೊಳ್ಳಲಿದೆ ನಟಿ ಶೃತಿ 'ಸತ್ಯಕಥೆ'

24 Aug 2017 1:16 AM | Entertainment
365 Report

ಬೆಂಗಳೂರು: ಪ್ರತಿಯೊಬ್ಬರ ಬದುಕಿನಲ್ಲಿ ಅನುಭವಕ್ಕೂ ಮೀರಿದ ಸತ್ಯಕಥೆಗಳು ಎದುರಾಗುತ್ತವೆ. ನಾವು ಪಯಣಿಸುವ ಸತ್ಯದ ಅನಾವರಣ ಕಹಿಯಂತೆ ಕಂಡರು ಅದು ವಾಸ್ತವ ಪ್ರಪಂಚದ ಬಗ್ಗೆ ನಮ್ಮ ಮುಂದೆ ತೆರದುಕೊಳ್ಳುತ್ತದೆ. ಸುಳ್ಳಿನ ಪೊರೆ ಕಳಚಿ, ಸತ್ಯದ ದರ್ಶನವಾಗುತ್ತದೆ, ಈ ವಿಭಿನ್ನ ಅನುಭವದ ಕಥೆಯನ್ನು ಹೇಳಲು ಹೊರಟಿದ್ದಾರೆ ಕನ್ನಡದ ನಟಿ ಶೃತಿ.

ಉದಯವಾಹಿನಿಯಲ್ಲಿ ಪ್ರಸಾರವಾಗುವ ಈ ಕಾರ್ಯಕ್ರಮವನ್ನು ನಟಿ ಶೃತಿ ನಡಿಸಿಕೊಡಲಿದ್ದಾರೆ. ಸೋಮವಾರ ಆಗಸ್ಟ್ 28ರಂದು
ಸೋಮವಾರದಿಂದ ಶುಕ್ರವಾರದವರೆಗೆ ಈ ಕಾರ್ಯಕ್ರಮ ಪ್ರಸಾರವಾಗಲಿದೆ. ಕಾರ್ಯಕ್ರಮದ ಸಾರಥ್ಯ ಕನ್ನಡದ ಹಿರಿಮೆಯ
ಭಾವಪೂರ್ಣ ನಟನೆಗೆ ಪಾತ್ರರಾದ ಶ್ರುತಿ ನಡೆಸಿಕೊಡುತ್ತಿದ್ದಾರೆ. ಈ ಷೋನಲ್ಲಿ ಶ್ರುತಿ ಒಬ್ಬ ತಾಯಿಯಾಗಿ, ಸಹೋದರಿ ಯಾಗಿ,

ಜವಾಬ್ದಾರಿಯುತ ಯಜಮಾನಿಯಾಗಿ ತಮ್ಮ ಹಿಡಿತಕ್ಕೆ ತೆಗೆದುಕೊಂಡು ಸಮಸ್ಯೆ ಆಲಿಸಿ ಪ್ರಾಮಾಣಿಕವಾಗಿ ಪರಿಹರಿಸಲು ಪ್ರಯತ್ನಿಸುತ್ತಾರೆ.

ಇದೊಂದು ಕೌಟುಂಬಿಕ ಕಾರ್ಯಕ್ರಮವಾಗಿದ್ದು, ಒಡೆದ ಹಲವು ಮನಸುಗಳನ್ನು ಒಗ್ಗೂಡಿಸಿ ಅಭಿಪ್ರಾಯಗಳನ್ನು ಆಲಿಸಿ ಅವರವರಲ್ಲಿ ಮೂಡಿದ ತಪ್ಪುಅಭಿಪ್ರಾಯಗಳನ್ನುನಿವಾರಿಸಿ, ಅರಿವು ಮೂಡಿಸುವ ವೇದಿಕೆಗೆ ಬಂದವರನ್ನು ಒಂದು ಮಾಡಿ ಕಳುಹಿಸುವುದು ಈ ಶೋನ ಮುಖ್ಯ

ಹೊಣೆಗಾರಿಕೆಯಾಗಿದೆ.

ಪ್ರತಿ ಸಂಚಿಕೆಯಲ್ಲೂ ಹೊಸ ರೀತಿಯ ಆಯಾಮ ತರಬೇಕೆಂಬುದು ಈ ಕಾರ್ಯಕ್ರಮದ ಉದ್ದೇಶ. ಅನುಭವಿಗಳ ಮಾರ್ಗದರ್ಶನ
ಪಡೆದು ವಿಷಯವನ್ನು ಪರಾಮರ್ಶಿಸಿ ಪರಿಹಾರ ನೀಡಲಾಗುವುದು.

Edited By

venki swamy

Reported By

Sudha Ujja

Comments