'ಪದ್ಮಾವತಿ'ಯಲ್ಲಿ ಸಲ್ಮಾನ್ -ಐಶ್ವರ್ಯ ನಟಿಸಬೇಕಿತ್ತು,ಸಲ್ಮಾನ್ ರಿಜೆಕ್ಟ್ ಮಾಡಿದ್ದೇಕೆ?
ಮುಂಬೈ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಚಿತ್ರದಲ್ಲಿ ರಣಬೀರ್ ಹಾಗೂ ದೀಪಿಕಾ ಪಡುಕೋಣೆ ನಟಿಸುತ್ತಿದ್ದಾರೆ. ಈ ಹಿಂದೆ ಚಿತ್ರೀಕರಣದ ವೇಳೆ ವಿವಾದಕ್ಕೆ ಈಡಾಗಿದ್ದು ಇದು ಹಳೇ ವಿಷಯ. ಸದ್ಯದ ಮಾಹಿತಿ ಪ್ರಕಾರ, ಈ ಸಿನಿಮಾದಲ್ಲಿ ಸಲ್ಮಾನ್ ಖಾನ್ ಹಾಗೂ ಐಶ್ವರ್ಯ ರೈ ನಾಯಕ ನಾಯಕಿ ಆಗಿ ನಟಿಸಬೇಕಿತ್ತಂತೆ.
ಈ ಚಿತ್ರಕ್ಕಾಗಿ ಸಂಜಯ್ ಲೀಲಾ ಬನ್ಸಾಲಿ ಅವರು ಸಲ್ಮಾನ್ ಖಾನ್ ಹಾಗೂ ಐಶ್ವರ್ಯ ರೈಗೆ ಪದ್ಮಾವತಿ ಕಥೆ ಹೇಳಿದ್ದರಂತೆ. ಇಬ್ಬರು ಒಪ್ಪಿದರೂ ಕೂಡ ನಂತರ ಅವರಿಬ್ಬರ ಮಧ್ಯೆ ನಡುವೆ ಉಂಟಾದ ವಿವಾದದಿಂದ ಚಿತ್ರದಲ್ಲಿ ನಟಿಸಲು ಸಾಧ್ಯವಾಗಲಿಲ್ಲ. ವಿವಾದ ತಣ್ಣಗಾದ ಮೇಲು ಇಬ್ಬರನ್ನು ಸಂಜಯ್ ಲೀಲಾ ಬನ್ಸಾಲಿ ಚಿತ್ರದಲ್ಲಿ ನಟಿಸುವಂತೆ ಕೇಳಿದ್ದರು. ಆದ್ರೆ ಐಶ್ವರ್ಯ ರೈ ಕೆಲವು ಷರತುಗಳನ್ನು ವಿಧಿಸಿ ಒಪ್ಪಿದರು, ಆದ್ರೆ ಸಲ್ಮಾನ್ ಖಾನ್ ನಿರಾಕರಿಸಿಬಿಟ್ಟರು. ಚಿತ್ರಕತೆಯಲ್ಲಿ ಪದ್ಮಾವತಿ ಹಾಗೂ ಅಲ್ಲಾವುದ್ದೀನ್ ಖಿಲ್ಜಿ ಮಧ್ಯೆ ಹೆಚ್ಚಿನ ಪ್ರೇಮ ದೃಶ್ಯಗಳು ಇಲ್ಲದಿರುವುದೇ ಸಲ್ಮಾನ್ ಚಿತ್ರವನ್ನು ನಿರಾಕರಿಸಲು ಕಾರಣವಂತೆ.
Comments