ನಟಿ ಪ್ರಿಯಾಂಕಾ ಛೋಪ್ರಾಗೆ ಭಾರತಕ್ಕೆ ಮರಳದಂತೆ ಎಚ್ಚರಿಕೆ ನೀಡಿದ ಜನರು!

ನವದೆಹಲಿ: ಭಾರತೀಯ ಚಿತ್ರರಂಗದಲ್ಲಿ ಪ್ರಿಯಾಂಕಾ ಛೋಪ್ರಾ ಅದ್ಭುತ ನಟಿ. ಬಾಲಿವುಡ್ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ನಟಿ ಪಿಗ್ಗಿಗೆ ಜನರು ಭಾರತಕ್ಕೆ ಮರಳದಂತೆ ಎಚ್ಚರಿಕೆ ನೀಡಿದ್ದಾರೆ. ಅಷ್ಟಕ್ಕೂ ನಟಿ ಪ್ರಿಯಾಂಕಾ ಛೋಪ್ರಾ ಟ್ರೂಲ್ ಗೆ ಒಳಗಾಗಲು ಕಾರಣವೇನು ? ಜನರಿಂದ ಆಕೆಗೆ ಬೈಗುಳ ಕೇಳಿ ಬಂದಿದ್ದು ಯಾಕೆ ?ಎಂಬುದರ ಬಗ್ಗೆ ವರದಿ ಇಲ್ಲಿದೆ.
15 ಆಗಸ್ಟ್ ರಂದು ಸ್ವಾತಂತ್ರ್ಯ ದಿನಾಚರಣೆ ದಿನದಂದು ನಟಿ ಪ್ರಿಯಾಂಕಾ ಛೋಪ್ರಾ ಸೀರೆ ಉಡುದಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ. ತನ್ನ ಕೊರಳಲ್ಲಿ ದುಪ್ಪಟ್ಟಾವನ್ನು ಸುತ್ತಿಕೊಂಡು, ಟಿ-ಶರ್ಟ್ ಧರಿಸಿರುವ ನಟಿ ಪ್ರಿಯಾಂಕಾಗೆ ಎಲ್ಲೆಡೆಯಿಂದ ಟೀಕೆಗಳು ವ್ಯಕ್ತವಾಗುತ್ತಿವೆ. ಈಗ 'ಇನ್ಸ್ ಟಾಗ್ರಾಮ್ ನಲ್ಲಿ ಫಾಲೋವರ್ಸ್ ತೀರ್ವ ತರಾಟೆಗೆ ತೆಗೆದುಕೊಂಡಿರುವುದು ವಿವಾದಕ್ಕೆ ಗ್ರಾಸವಾಗಿದೆ.
ಸ್ವಾತಂತ್ರ್ಯ ದಿನದಂದು ನಟಿ ಪ್ರಿಯಾಂಕಾ ಛೋಪ್ರಾ ತಮ್ಮ ವಿಡಿಯೋ ವನ್ನು ಇನ್ಸ್ ಟಾಗ್ರಾಮ್ ನಲ್ಲಿಪೋಸ್ಟ್ ಮಾಡಿದ್ದರು. ಇದರಿಂದ ಸಿಟ್ಟಾದ ಫಾಲೋವರ್ಸ್ ಗಳು 'ಮತ್ತೆ ಭಾರತಕ್ಕೆ ಹಿಂತಿರುಗಬೇಡ' , ಸ್ವಾತಂತ್ರ್ಯ ದಿನದಂದು ಪಿಗ್ಗಿಗೆ ಸೀರೆ ಉಡಲು ಗೊತ್ತಾಗಲಿಲ್ಲವೇ ಎಂದು ಪ್ರಶ್ನಿಸಿದ್ರೆ, ಮತ್ತೊಬ್ಬರು ಸೆಲ್ವಾರ್ -ಕಮೀಝ್ ಇರಲಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.ಸಾಂಪ್ರದಾಯಿಕ ಉಡುಪಿನಲ್ಲಿ ಕಾಣಿಸಿಕೊಳ್ಳದಿರುವುದಕ್ಕೆ ಆಕೆಯ ಫಾಲೋವರ್ಸ್ ಗಳಿಗೆ ಬೇಸರ ತಂದಿದೆ. ಇದರಿಂದ ಭಾರತಕ್ಕೆ ಮತ್ತೆ ಮರಳಬೇಡಿ ಎಂದು ಎಚ್ಚರಿಕೆ ನೀಡಿದ್ರೆ, ಮತ್ತೆ ಕೆಲವರು ಕೊರಳಲ್ಲಿ ಧ್ವಜದ ಬಣ್ಣದ ದುಪ್ಪಟ್ಟಾವನ್ನು ಹಾಕಿಕೊಂಡು ಧ್ವಜಕ್ಕೆ ಅವಮಾನ ಮಾಡಿದ್ದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
Comments