ಸ್ವಾತಂತ್ರ್ಯ ದಿನಾಚರಣೆ ಬಗ್ಗೆ ಶರಣ್, ರಚಿತ್ ರಾಮ್ ಮಾತು

71ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮ. ಪ್ರತಿಯೊಬ್ಬರು ಸ್ವಾತಂತ್ರ್ಯದ ಕಲ್ಪನೆ ಭಿನ್ನವಾಗಿರುತ್ತದೆ. ತೆರೆ ಮೇಲೆ ಕಾಣಿಸಿಕೊಳ್ಳುವ ಸಿನಿಮಾ ನಟ-ನಟಿಯರು ಸ್ವಾತಂತ್ರ್ಯ ದಿನಾಚರಣೆ ಬಗ್ಗೆ ಮಾತನಾಡಿದ್ದಾರೆ. ಅವರ ಅಭಿಪ್ರಾಯಗಳು ಇಲ್ಲಿವೆ.
ನಟ ಶರಣ್
ಸ್ವಾತಂತ್ರ್ಯ ದಿನಾಚರಣೆ ಎಂದರೆ ಶರಣ್ ಪ್ರಕಾರ ಸ್ವಾತಂತ್ರ್ಯದ ಸಂಕೇತವಂತೆ. ಸ್ವಾತಂತ್ರ್ಯ ಎಂಬ ಪದವೇ ಜವಾಬ್ದಾರಿಯ ಸಂಕೇತ.
ಈ ಸ್ವಾತಂತ್ರ್ಯ ಅಷ್ಟು ಸುಲಭವಾಗಿ ಸಿಕ್ಕಿದ್ದಲ್ಲ. ಸಾವಿರಾರು ಜನರ ಜೀವದಾನದ ಫಲವಾಗಿ ನಾವಿಂದು ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ.
ಸದ್ಯ ನಾವಿರುವ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ನಮಗೆ ಸಿಕ್ಕ ಸ್ವಾತಂತ್ರ್ಯವನ್ನು ಕಾಪಾಡಿಕೊಂಡು ಹೋಗಬೇಕಿದೆ ಎಂದು ತಿಳಿಸಿದ್ದಾರೆ.
ನಟಿ ರಚಿತಾ ರಾಮ್
ಶಾಲೆಯಲ್ಲಿ ಈ ರೀತಿಯ ರಾಷ್ಟ್ರೀಯ ಹಬ್ಬಗಳ ಆಚರಣೆ ಬಂದರೆ ನಾನು ಮುಂದಿರುತ್ತಿದ್ದೆ. ಮನೆಯಲ್ಲಿ ಅಮ್ಮ , ಅಪ್ಪ ಡ್ಯಾನ್ಸ್
ಕಲಿತು ಅದನ್ನು ಶಾಲೆಯಲ್ಲಿ ಉಳಿದವರಿಗೆ ನಾನೇ ಕೊರಿಯೋಗ್ರಾಫ್ ಮಾಡುತ್ತಿದ್ದೆ. ನನ್ನ ಪ್ರಕಾರ ಸ್ವಾತಂತ್ರ್ಯ ಎಂದರೆ ಒಂಟಿ ಮಹಿಳೆ
ರಾತ್ರಿ ಹೊತ್ತು ಹೊರಗೆ ಸ್ವತಂತ್ರಯ ಸುತ್ತಾಡುವುದಲ್ಲ. ಇದೆಲ್ಲ ಸಾಫ್ಟವೇರ್ ಯುಗಜಲ್ಲಿ ಕಾಮನ್ ಆಗಿದೆ. ಇದೆಲ್ಲಕ್ಕಿಂತ
ಹಿಂದಿನ ಹೋರಾಟಗಾರರು ಬಳುವಳಿಯಾಗಿ ನೀಡಿ ಹೋದ ಸ್ವಾತಂತ್ರ್ಯ ವನ್ನು ಅಷ್ಟೇ ಜತನದಿಂದ ಕಾಪಾಡಿಕೊಂಡು ಹೋಗಬೇಕಿದೆ.
ಎಂದು ಹೇಳಿದ್ದಾರೆ.
Comments