ನಟಿ ಹರ್ಷಿಕಾ ಪೂಣಚ್ಚ ಎಂಬ ಕನ್ನಡದ ನಟಿ

ಬೆಂಗಳೂರು: ಕನ್ನಡದ ಬಿಚ್ಚು ಮನಸ್ಸಿನ ಸುಂದರಿಯರಲ್ಲಿ ಹರ್ಷಿಕಾ ಪೂಣಚ್ಚ ಸಹ ಒಬ್ಬರು, ಆಗಾಗ ವಿವಾದಗಳನ್ನು ಬಿಚ್ಚಿ ಸ್ಯಾಂಡಲ್ ವುಡ್ ಮಂದಿ ತಲೆ ಕೆಡಿಸಿಕೊಳ್ಳುವಂತೆ ಮಾಡಿರುವುದರಲ್ಲಿ ನಿಸ್ಸೀಮೆ. ಆಕೆ ಬಂದ ಕಡೆ ಸ್ವಲ್ಪ ಗಲಾಟೆ ಇರಲೇ ಬೇಕು ಎಂದು ಹೇಳುತ್ತಾರೆ ಗಾಂಧಿ ನಗರದ ಮಂದಿ.
ಹರ್ಷಿಕಾ ಪೂಣಚ್ಚ ತಮ್ಮ ಚಲನಚಿತ್ರ ಬಗೆಗಿನ ಪ್ರೀತಿ, ಹಾಗೂ ಉದಯ ಟೆಲಿವಿಜನ್ ಜತೆಗಿನ ಸಹಯೋಗದ ಬಗ್ಗೆ ಮಾತನಾಡಿದ್ದಾರೆ. ಮೊದ ಮೊದಲು ಉದಯ ಟಿವಿ ಕಿರುತೆರೆಯ ಸರಣಿ ಕಾರ್ಯಕ್ರಮದಲ್ಲಿ ಅತಿಥಿ ಆಗಿ ಕಾಣಿಸಿ ಕೊಳ್ಳುತ್ತಿದ್ದ ಅವರು, ಸ್ಯಾಂಡಲ್ ವುಡ್ ಇಂಡಸ್ಟ್ರಿಯಲ್ಲಿ ಹರ್ಷಿಕಾ ಪೂಣಚ್ಚಗೆಯಶಸ್ಸು ದೊರಯಲು ಕಾರಣವಾಯಿತು. ಅವರ ವೃತ್ತಿ ಜೀವನ ಆರಂಭವಾಗಿದ್ದು ಎರಡು ಟಾಕ್ -ಶೋ ಗಳ ಮೂಲಕ. ಟಾಕ್ ಶೋ ಬಳಿಕ ಅವರ ವೃತ್ತಿ ಬದುಕಿನಲ್ಲಿ ಕನ್ನಡ ಚಿತ್ರಗಳಲ್ಲಿ ನಟಿಸುವ ಅವಕಾಶ ಬಾಗಿಲು ತೆರೆಯಿತು. ಪಿಯುಸಿ ಕನ್ನಡದ ಚಿತ್ರದ ಮೂಲಕ ಚೊಚ್ಚಲ ಪ್ರದರ್ಶನ ನೀಡಿದ ಅವರು, ಅನಂತರ ಬಿಗ್ ಸ್ಟಾರ್ ಗಳ ಜತೆಗೆ ನಟಿಸುವ ಅವಕಾಶ ದೊರೆಯಿತು.
ಶಿವರಾಜ್ ಕುಮಾರ್ ಜತೆಗೆ ಹರ್ಷಿಕಾ ನಟಿಸುವ ಅವಕಾಶ ಗಿಟ್ಟಿಸಿಕೊಂಡರು.
ಉತ್ತಮ ಪೋಷಕ ನಟಿ ಪ್ರಶಸ್ತಿ ಕೂಡ ಇವರಿಗೆ ದೊರೆತಿದೆ.
Comments